ಸುದ್ದಿಬಿಂದು ಬ್ಯೂರೋ

ಹೊನ್ನಾವರ: ಆಗಾಗ ಜನರಿಗೆ ತೊಂದರೆ ನೀಡುತ್ತಿದ್ದ, ಕಪ್ಪು ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಘಟನೆ ತಾಲ್ಲೂಕಿನ ಕಡ್ಲೆ ಗ್ರಾಮದ ಜಡ್ಡಿಗದ್ದೆಯಲ್ಲಿ ನಡೆದಿದೆ.

ಸಾಲ್ನೋಡ್, ಹೊಸಾಕುಳಿ, ಕಡ್ಲೆ ಗ್ರಾಮದ ವಿವಿಧಡೆ ಆಗಾಗ ಚಿರತೆ ಕಾಣಿಸಿಕೊಣಿಸಿಕೊಳ್ಳುತ್ತಿತ್ತು. ಇನ್ನೂ ವಂದೂರು ಜಡ್ಡಿಗದ್ದೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಜೋರಾಗಿತ್ತು. ಜಾನುವಾರು ಹಾಗೂ ಮನೆಯಂಗಳದಲ್ಲಿನ ನಾಯಿಗಳು ಚಿರತೆಗೆ ಬಲಿಯಾಗುವ ಘಟನೆಗಳು ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಚಿರತೆಯ ಚಲನವಲನಗಳ ಬಗ್ಗೆ ನಿಗಾ ಇಡುವುದರ ಜೊತೆಗೆ ಬೋನಿನ ಒಂದು ಪ್ರತ್ಯೇಕ ಭಾಗದಲ್ಲಿ ನಾಯಿಯೊಂದನ್ನು ಕಟ್ಟಿ ಹಾಕಿ ಚಿರತೆ ಬೋನಿನೊಳಗೆ ಬರುವಂತೆ ಕಾರ್ಯಾಚರಣೆ ಮಾಡಿದ್ದಾರೆ. ಇದೀಗ ಚಿರತೆ ಬೋನಿಗೆ ಬಿದ್ದಿರುವುದರಿಂದ ಸ್ಸಳೀಯರ ಆತಂಕ ದೂರವಾಗಿದೆ.