ಸುದ್ದಿಬಿಂದು ಬ್ಯೂರೋ

ಭಟ್ಕಳ :ಲಕ್ಷಾಂತರ ಭಕ್ತ ಸಮುದಾಯವನ್ನ ಹೊಂದಿರುವ ಶಕ್ತಿ ದೇವತೆ ನೀಲಗೋಡ ಯಕ್ಷ ಚೌಡೇಶ್ವರಿ ದೇವಾಲಯಕ್ಕೆ ಇಂದು ಜೆಡಿಎಸ್ ಅಭ್ಯರ್ಥಿಯಾಗಿರುವ ನಾಗೇಂದ್ರ ನಾಯ್ಕ ಅವರು ಭೇಟಿ ನೀಡಿ ದೇವರ ಆರ್ಶಿವಾದ ಪಡೆದು ಮತಯಾಚನೆ ಮಾಡಿದರು. ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಮಹಾದೇವ ಅಂಬಿಗ ಅವರು ನಾಗೇಂದ್ರ ‌ನಾಯ್ಕ ಅವರ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಗೇಂದ್ರ ‌ನಾಯ್ಕ ಅವರ ಗೆಲುವಿಗಾಗಿ ಪ್ರಾರ್ಥಿಸಿಕೊಂಡರು.

ಭಟ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹೈಕೋರ್ಟ್ ನ್ಯಾಯವಾಗಿ ಆಗಿರುವ ಭಟ್ಕಳದ ನಿವಾಸಿ ನಾಗೇಂದ್ರ ನಾಯ್ಕ ಅವರು ಈ ಬಾರಿ ಅಪಾರ ಜನ ಬೆಂಬಲದೊಂದಿದೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಆರಂಭದಲ್ಲೆ ಅವರು ಕ್ಷೇತ್ರದ‌ ಮತದಾರರ ವಿಶ್ವಾಸವನ್ನ ಗಳಿಸಿಕೊಂಡಿದ್ದಾರೆ. ಇವರು ನಿನ್ನೆಯಷ್ಟೆ ತಮ್ಮ ಅಪಾರ ಬೆಂಬಲಿಗರೊಂದಿಗೆ
ಉಮೇದುವಾರಿಕೆಯನ್ನ ಸಲ್ಲಿಕೆ ಮಾಡಿದ್ದರು.

ಇಂದು ಅವರು ತಮ್ಮ ಬೆಂಬಲಿಗರ ಜೊತೆ ಕ್ಷೇತ್ರದಲ್ಲಿ ಪ್ರಚಾರ ಮುಂದುವರೆಸಿದ್ದಾರೆ. ಯಕ್ಷ ಚೌಡೇಶ್ವರಿ ದೇವಾಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ದೇವಾಲಯಕ್ಕೆ ಬಂದಿದ್ದ ಸಾವಿರಾರು ಭಕ್ತರ ಬಳಿ ತಮ್ಮಗೆ ಬೆಂಬಲಿಸುವಂತೆ ಕೇಳಿಕೊಂಡರು. ಒಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ ಪರವಾಗಿ ಜನ ಬೆಂಬಲ ವ್ಯಕ್ತವಾಗುತ್ತಿದೆ.