ಸುದ್ದಿಬಿಂದು ಬ್ಯೂರೋ
ಕುಮಟ‌ :
ಭಾರೀ ಮಳೆಯಿಂದಾಗಿ 30ಕ್ಕೂ ಹೆಚ್ಚು ಮರಗಳು ಹಾಗೂ ವಿದ್ಯುತ್ ಕಂಬಗಳಿ ನೆಲಕ್ಕೂರುಳಿ ಓರ್ವ ಗಾಯಗೊಂಡಿರುವ ಘಟನೆ ಪಟ್ಟಣದ ಮಾಸ್ತಿಕಟ್ಟಾ ಹಾಗೂ ನೆಲ್ಲಿಕೇರಿಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್‌ ಘೋಷಣೆ‌‌ ಮಾಡಲಾಗಿದ್ದು, ನಾಳೆ ಸಹ ಜಿಲ್ಲೆಯ ಕರಾವಳಿಯಲ್ಲಿ ಭಾರೀ ಮಳೆ‌ ಸುರಿಯಲಿದೆ. ಕೆಲ ಗಂಟೆಗಳ‌ ಹಿಂದೆ ಕುಮಟ ಪಟ್ಟಣದಲ್ಲಿ‌ ಬಿಸಿದ ಬಿರುಗಾಳಿಗೆ ಮಾಸ್ತಿಕಟ್ಟ ಹಾಗೂ ನೆಲ್ಲಿಕೇರಿಯಲ್ಲಿ ಮುವತ್ತಕ್ಕೂ ಹೆಚ್ಚು ಮರಗಳ ಹಾಗೂ ಕೆಲವು ವಿದ್ಯುತ್ ಕಂಬಗಳು ನೆಲಕ್ಕೂರುಳಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ಮಾಸ್ತಿಕಟ್ಟಾ ಬಳಿ ಮೂರು ಬೈಕ್‌ ಹಾಗೂ ಕಾರ‌ ಮೇಲೆ ಮರ ಬಿದ್ದಿದ್ದು ಕಾರ ಹಾಗೂ ಬೈಕ್ ಜಖಂಗೊಂಡಿದೆ. ಇನ್ನೂ ಗೂಡಂಗಡಿ ಮೇಲೆ ಮರ ಬಿದ್ದ ಪರಿಣಾಮ ಓರ್ವ ಗಾಯಗೊಂಡಿದ್ದಾನೆ, ಇನ್ನೂ ನಾಲ್ಕು ಮನೆಗಳು, ಶಾಲೆಯ ಕೊಠಡಿ ಮೇಲೆಯೂ ಮರ ಬಿದ್ದು ಜಖಂಗೊಂಡಿದೆ.

ಗೋಕರ್ಣ ದ ಮಹಾಬಲೇಶ್ವರ ದೇವಸ್ಥಾನದ ಅಮೃತಾನ್ನ ಭೋಜನ ಶಾಲೆಯ ಮೇಲೂ ಮರ ಉರುಳಿ ಹಾನಿ ಉಂಟಾಗಿದ್ದು,ಕುಮಟದಲ್ಲಿ ಧಾರಾಕಾರವಾಗಿ ‌ಮಳೆ‌ ಸುರಿಯುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಆರು ಕುಟುಂಬದವರನ್ನ ಹಂದಿಗೋಣ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ರವಾನಿಸಲಾಗಿದೆ.