ಸುದ್ದಿಬಿಂದು ಬ್ಯೂರೋ
ಕಾರವಾರ : ಕಾರ್ಮಿಕರನ್ನ ಕರೆದುಕೊಂಡು ಹೋಗುತ್ತಿದ್ದ ಸಾರಿಗೆ ಬಸ್ ಪಲ್ಟಿಯಾಗಿ ಬಸ್ ನಲ್ಲಿದ್ದ ಹಲವು ಕಾರ್ಮಿಕರು ಗಾಯಗೊಂಡಿರುವ ಘಟನೆ ಬಿಣಗಾದ ಸಂಕ್ರುಬಾಗ್ ರಾಷ್ಟೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅರಗಾರದಲ್ಲಿರುವ ಸಿರ್ಬಡ್ ನೌಕಾನೆಲೆಗೆ ಪ್ರತಿನಿತ್ಯ ನೂರಾರು ಮಂದಿ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿದ್ದು, ಕೆಲಸಕ್ಕೆ ಹೋಗುವ ಕಾರ್ಮಿಕರನ್ನ ಸಾರಿಗೆ ಬಸ್ ನಲ್ಲಿ ಕರೆದುಕೊಂಡು ಹೋಗಲಾಗುತ್ತಿದ್ದು, ಇಂದು ಸಹ ಬೆಳಿಗ್ಗೆ ಕಾರವಾರ ಹಾಗೂ ಬಿಣಗಾದಿಂದ ಕಾರ್ಮಿಕರನ್ನ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದ ಕೆಎಸ್ಆರ್‌ಸಿ ಬಸ್ ಹೆದ್ದಾರಿ ಪಕ್ಕದ ಕಂಕದಕ್ಕೆ ಉರುಳಿ ಬಿದ್ದಿದೆ.
ಇನ್ನೂ ಓದಿ:- ಯುವತಿ ಎದುರು ಹಸ್ತ ಮೈಥುನ
ಇದರಿಂದಾಗಿ ಬಸ್ ನಲ್ಲಿ ಇದ್ದ ಹೆಚ್ಚಿನ ಕಾರ್ಮಿಕರಿಗೆ ಗಾಯವಾಗಿದ್ದು ಗಾಯಗೊಂಡ ಎಲ್ಲರನ್ನು ಕಾರವಾರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ ನಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಸಾರಿಗೆ ಬಸ್ ಈರೀತಿಯಾಗಿ ಪದೆ ಪದೆ ಪಲ್ಟಿಯಾಗುತ್ತಿದೆ. ಬಸ್ ನಿರ್ವಹಣೆ ಸರಿಯಾಗಿ ಇರದೆ ಇರುವುದೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಕಾರವಾರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ನ ಬ್ಲೇಡ್ ಕಟ್ ಆಗಿ ಬಸ್ ಪಲ್ಟಿಯಾಗುವ ಹಂತಕ್ಕೆ ತಲುಪ್ಪಿದ್ದು, ಈ ಗುಜರಿ ಬಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯಲ್ಲಿ ವಿಡಿಯೋ ವೈರಲ್ ಆಗಿದೆ..ಈ ಘಟನೆ ಮರೆಯುವ ಮುನ್ನವೆ ಇದೀಗ ಮತ್ತೊಂದು ಘಟನೆ ಸಂಬಂಧಿಸಿದೆ. ಇದರಿಂದಾಗಿ ಕೆಎಸ್ಆರ್‌ಟಿಸಿ ಬಸ್ ನಲ್ಲಿ ಸಚಾರ ಮಾಡಬೇಕಾದ್ದರೆ ಪ್ರಯಾಣಿಕರು ಹತ್ತಾರು ಬಾರಿ ಆಲೋಚನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ..