ಸುದ್ದಿಬಿಂದು ಬ್ಯೂರೋ
ಅಂಕೋಲಾ : ರೈಲ್ವೆಯಲ್ಲಿ(Railway)ಪ್ರಯಾಣಿಸುತ್ತಿದ್ದ ಯುವತಿ ಓರ್ವಳು ಬೋಗಿಯಲ್ಲಿ ಮಲಗಿದ್ದ ವೇಳೆ ಆಕೆ ಮಲಗಿದ್ದ ಬಳಿ ಹೋದ ಮಧ್ಯ ವಯಸ್ಕರ ನೋರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮಾದನಗೇರಿ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದು ಆರೋಪಿಯನ್ನ ಬಂಧಿಸಲಾಗಿದೆ.
ಕನ್ಯಾಕುಮಾರಿಯ(Kanyakumari)22ವರ್ಷದ ಯುವತಿಯೊಂದಿಗೆ ಕೇರಳ ಕಣ್ಣೂರಿನ ಹಾಲಿ ಮಹಾರಾಷ್ಟ್ರದ ಸಾಂಗ್ಲಿ ಅರೋಡೆಯಲ್ಲಿ ವಾಸವಾಗಿರುವ ಅಂದಾಜು 47ವಯಸ್ಸಿನ (ಮಧ್ಯ ವಯಸ್ಕರ) ದತ್ತಾತ್ರೇಯ ಸುಬ್ಬರಾವ್ ಚವಾಣ್ ಎಂಬಾತ ಯುವತಿ,ಮಲಗಿರುವ ವೇಳೆ ಅವಳ ಮುಖದ ಹತ್ತಿರ ತನ್ನ ಗು-ಪ್ತಾಂಗ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ.ರೈಲು ಸಂಖ್ಯೆ 11098 ಪೂನಾ ಎಕ್ಸಪ್ರೆಸ್ ರೈಲಿನಲ್ಲಿ ಜನವರಿ 2ರಂದು ಈ ಘಟನೆ ನಡೆದಿದೆ.
ಈ ಕುರಿತು ಯುವತಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೈಲ್ವೆ ಪೊಲೀಸರು ಮತ್ತು ಗೋವಾ ಪೊಲೀಸರ ಸಹಕಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.