ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಾಲಿಗೆ ಯಂತ್ರಕಟ್ಟಿಕೊಂಡು ಹಾರಾಡುತ್ತಿದ್ದ ರಣಹದ್ದೊಂದು ಕಾರವಾರದ ಜನರನ್ನೆ ಬೆಚ್ಚಿಬೀಳಿಸಿದ್ದು, ಹದ್ದಿನಕ್ಕಿಂತಲೂ ಹದ್ದಿನ ಕಾಲಿಗೆ ಕಟ್ಟಿದ ಯಂತ್ರ ಭಯದ ಜತೆ ಪೋಲಿಸ್ ಇಲಾಖೆಯ ನಿದ್ದೆಗೆಡಿಸುವಂತೆ ಮಾಡಿತ್ತು. ಜಿಲ್ಲೆಯಲ್ಲಿ ರಕ್ಷಣಾ ಇಲಾಖೆಯ ಯೋಜನೆಗಳು ಸೂಕ್ಷ್ಮ ಪ್ರದೇಶಗಳು ಇರುವ ಸ್ಥಳ ಇಂತ ಸ್ಥಳದಲ್ಲಿ ಯಂತ್ರಕಟ್ಟಿಕೊಂಡ ರಣಹದ್ದು ಹಾರಾಡಿರುವುದು ಸಾಕಷ್ಟು ಆತಂಕದ ಜೊತೆಗೆ ಅನುಮಾನಕ್ಕೂ ಕಾರಣವಾಗಿತ್ತು.
ಕಾರವಾರದ ಕೋಡಿಬಾಗ ಕಾಳಿ ನದಿ ಸುತ್ತಮುತ್ತ ಹಾರಾಡಿ ಮನೆಯ ಚಾವಣಿ ಮೇಲೆ ಅಲ್ಲಿ ಇಲ್ಲಿ ಕುಳಿತು ಕೊಳ್ಳುವ ರಣಹದ್ದು ನೋಡಿದವರಿಗೆ ಆಶ್ಚರ್ಯ ಜತಯಲ್ಲಿ ಭಯ ಉಂಟಾಗಿತ್ತು, ಈ ರಣಹದ್ದು ಸಾಮಾನ್ಯ ಹದ್ದಿನಂತೆ ಇರಲಿಲ್ಲ ಬದಲಾಗಿ ಕಾಲಿಗೆ ಯಂತ್ರವನ್ನು ಕಟ್ಟಿಕೊಂಡು ಹಾರಾಡುತ್ತಿತ್ತು, ಹದ್ದಿಗೆ ಯಾರಾದ್ದರು. ಯಂತ್ರವನ್ನು ಕಟ್ಟಿರಬೇಕು ಎಂದು ಎಲ್ಲರೂ ಉಹಿಸಿಕೊಂಡಿದ್ದರು. ಆದರೆ ಯಾರು ಕಟ್ಟಿದ್ದಾರೆ..? ಉಗ್ರ ಸಂಘಟನೆಗಳ ಕೈವಾಡವೋ, ಹೀಗೆ ಒಂದೊ ಎರಡೋ ಹತ್ತಾರು ಸಂಶಯಗಳು ಕಾಡತೊಡಗಿತ್ತು, ಇದನ್ನ ನೋಡಿದ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದು ಪೋಲಿಸರಿಗೂ ಇದ ಇದು ಆತಂಕದ ಸುದ್ದಿಯಾಗಿತ್ತು,
ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಇದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಯ ಸಂಶೋಧನೆ ಉದ್ದೇಶದಿಂದ ಬಳಸಲಾದ ಯಂತ್ರ ಎಂದು ಖಾತ್ರಿ ಆಗಿದ್ದು, ರಣಹದ್ದು ಜೀವನದ ಬಗ್ಗೆ ಅಧ್ಯಯನ ನಡೆಸಲು ಬಾಂಬೆ ಅರಣ್ಯ ಇಲಾಖೆಯಿಂದ ಹಾರಿಸಿದ್ದು ಎಂದು ತಿಳಿಯಿತು. ಈ ಘಟನೆ ಬೆಳಕಿಗೆ ಬಂದಾಗ ಇಲ್ಲಿನ ಜನರ ತಲೆಯಲ್ಲಿ ನೌಕಾನೆಲೆ ಪ್ರದೇಶ, ಕೈಗಾ ಅಣು ವಿದ್ಯುತ್ ಸ್ಥಾವರ, ಇಲ್ಲಿರುವ ಅನೇಕ ಡ್ಯಾಂ ಗಳು, ಈ ಎಲ್ಲಾ ಸ್ಥಳದಲ್ಲಿ ಉಗ್ರ ಸಂಘಟನೆಗಳು ಈ ಜಾಗದ ಕುರಿತು ಗುಪ್ತವಾಗಿ ಮಾಹಿತಿ ಕಲೆ ಹಾಕಲು ಉಗ್ರ ಸಂಘಟನೆಯವರು ಭಯೋತ್ಪಾದಕ ಚಟುವಟಿಕೆ ನಡೆಸಲು ಕಾರ್ಯಾಚರಣೆ ನಡೆಸುತ್ತಿದ್ದಾರ ಹೀಗೆ ಹಲವಾರು ಸಂಶಯ ಎಲ್ಲರನ್ನೂ ಕಾಡಿತ್ತು.
ಇದರ ಜತೆಗೆ ಪೋಲಿಸ್ ಇಲಾಖೆ ಸಹ ಇದೆ ಸಂಶಯ ಕಾಡಿತ್ತು. ಅದರೆ ಯಂತ್ರದ ಮೇಲೆ ಬರೆದ ಬರವಣಿಗೆ ಮತ್ತು ಬಳಿಕ ಪರಿಶೀಲನೆ ನಡೆಸಿದ ಮೇಲೆ ಎಲ್ಲರ ಆತಂಕ ದೂರವಾಗಿದೆ.
ಗಮನಿಸಿ