ಸುದ್ದಿಬಿಂದು ಬ್ಯೂರೋ
ಕಾರವಾರ : ಕಳೆದ ವರ್ಷ ರಾಜ್ಯಾದ್ಯಂತ ಅತೀ ಹೆಚ್ಚಿನ ಸ್ಥಾನವನ್ನ ಗೆದ್ದು, ಅಧಿಕಾರಕ್ಕೆ ಬಂದ ಕಾಂಗ್ರೆಸ್, ಚುನಾವಣಾ ಪೂರ್ವ ಘೋಷಣೆ ಮಾಡಿದ್ದ ಪಂಚ ಯೋಜನೆಯನ್ನ ಜಾರಿ ಮಾಡುವ ಮೂಲಕ ಜನತೆಯ ಮನ-ಮನೆಯ ಮಾತಾಗಿರುವ ಸಿ ಎಂ ಸಿದ್ದರಾಮಯ್ಯ ಅವರು ನಿರಂತರ ಬಜೆಟ್ ಮಂಡಿಸಿ ರಾಜ್ಯದಲ್ಲಿ ಖ್ಯಾತಿಯ ಮುಖ್ಯಮಂತ್ರಿ ಎನೆಸಿಕೊಂಡಿದ್ದಾರೆ. ಅವರು ಈ ನೆಲದ ಬಡ ಜನರಿಗೆ ನಾನೊಬ್ಬ ಬಡವರ ಬಂಧು ಎಂದು ಸಾಭೀತು ಪಡಿಸಿದ್ದಾರೆ.ಆದರೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ನವರನ್ನ ಸೈಡಲೈನ್ ಮಾಡಲಾಗತ್ತಾ ಇದೇಯಾ ಎನ್ನುವ ಅನುಮಾನ ಅನೇಕರನ್ನ ಕಾಡಲಾರಂಭಿಸಿದೆ.
ಈ ಅನುಮಾನ ಸೃಷ್ಠಿಗೆ ಕಾರಣ ಸ್ಪಷ್ಟ. ಇತ್ತಿಚೆಗೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಬೇಕು ಎಂದು ಶಿರಸಿಯ ಅನಂತಮೂರ್ತಿ ಹೆಗಡೆ ಪಾದ ಯಾತ್ರೆ ಹೊರಟು ಕಾರವಾರದಲ್ಲಿ ಮಾಧ್ಯಮದ ಎದರು ದೇಶಪಾಂಡೆ ಅವರನ್ನ ಟೀಕಿಸಿದರು.ಆಗ ಕಾಂಗ್ರೆಸ್ ಯೋಧರಂತೆ ವರ್ತಸಿದ ಜಿಲ್ಲೆಯ ಕೆಲವರು ನಾ ಮುಂದು ತಾ ಮುಂದು ಎಂದು ಅನಂತಮೂರ್ತಿ ಹೆಗಡೆ ವಿರುದ್ದ ಹೇಳಿಕೆ ನೀಡಿ ದೇಶಪಾಂಡೆ ಅವರ ಕೃಪಾರ್ಶಿವಾದಕ್ಕೆ ಒಳಗಾಗುವ ಪ್ರಯತ್ನ ಮಾಡಿದ್ದರು.ಇದೀಗ ಜಿಲ್ಲೆಯ ಸಂಸತ್ ಸದಸ್ಯ ಅನಂತಕುಮಾರ ಹೆಗಡೆ,ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ‘ದಮ್ಮ ಇದ್ದರೆ’ ಎಂದು ಹೇಳಿಕೆ ನೀಡಿ ವಾರ ಕಳೆದರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಸಹಿತ ಯಾವುದೇ ಪದಾಧಿಕಾರಿಗಳು ತುಟಿಪಿಟಿಕ್ ಎನ್ನದಿರುವುದು ಉತ್ತರಕನ್ನಡ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಲ್ಲ ಎಂಬ ಅನುಮಾನವನ್ನ ಕಾಂಗ್ರೆಸ್ ಕಾರ್ಯಕರ್ತರೆ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನವನ್ನ ಸಾಯಿ ಗಾಂವ್ಕರ್ ಅವರು ವಹಿಸಿಕೊಂಡಾಗಿನಿಂದ ಇಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹೊದ್ದುಕೊಂಡು ಮಲಗಿದಂತಾಗಿದೆ.ಈ ವಿಷಯ ಖುದ್ದು ಕಾಂಗ್ರೆಸ್ ಪಕ್ಷದ ಸಭೆಯಲ್ಲಿಯೇ ಚರ್ಚೆಯಾಗಿತ್ತು.ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಹೇಳುವಂತೆ ಮನೆ ಯಜಮಾನ ಸರಿಯಿದ್ದರೆ (ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್) ಮನೆಕೂಡ ಚೆನ್ನಾಗಿರುತ್ತದೆ.ಆದರೆ ಮನೆ ಯಜಮಾನ ಮಲ್ಲಗಿದ್ದರೆ ಏನಿದ್ದು ಏನು ಉಪಯೋಗ ಈ ಪರಿಸ್ಥಿತಿ ನಮ್ಮದಾಗಿದೆ ಎಂದು ಹೇಳುತ್ತಿದ್ದಾರೆ.
ಅದೆ ಕಾಂಗ್ರೆಸ್ ನ ಒಬ್ವ ಯಾವ ನಾಯಕ ಇಲ್ಲ ಕಾರ್ಯಕರ್ತ ನಾಗಿದ್ದರೂ ಬಿಜೆಪಿ ನಾಯಕ ವಿರುದ್ದ ಮಾತನಾಡಿದ್ದರೆ. ಆ ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ತಾಲೂಕಾ, ಗ್ರಾಮೀಣ ಮಟ್ಟದ ಪದಾಧಿಕಾರಿಗಳು ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದರು.ಆದರೆ ರಾಜ್ಯದ ಮುಖ್ಯಮಂತ್ರಿ ವಿರುದ್ದ ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಸಂಸದರೆ ಟೀಕೆ ಮಾಡಿದ್ದರೂ ಕಾಂಗ್ರೆಸ್ ನ ಯಾವೊಬ್ಬ ಪದಾಧಿಕಾರಿ ಕೂಡ ಸಂಸದರ ಹೇಳಿಕೆಗೆ ಉತ್ತರಿಸದೆ ಇರುವುದು ದುರಂತ.
ಸಂಸತ್ತ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಯುದ್ದ ಕಾಲದಲ್ಲಾದರೂ ಜಿಲ್ಲಾಧ್ಯಕ್ಷರು ಎಚ್ಚೆತ್ತುಕೊಳ್ಳುತ್ತಾರೋ ಅಥವಾ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ತಂಡ ನಿಷ್ಕ್ರಿಯವೋ ಎಂದು ಸಾಭೀತು ಪಡಿಸುತ್ತಾರೋ ಎನ್ನುವುದನ್ನ ಕಾದು ನೋಡಬೇಕಿದೆ.