ಸುದ್ದಿಬಿಂದು ಬ್ಯೂರೋ
ಬೆಂಗಳೂರು:ಇಂದಿನಿಂದ ರಾಜ್ಯಾದ್ಯಂತ ಪ್ರತಿ ಕ್ವಾಟರ್ ದರದಲ್ಲಿ ಏರಿಕೆಯಾಗಿದೆ. ಪ್ರತಿ ಒಂದು ಕ್ಚಾಟರ್ ಗೆ ಮೂವತ್ತರಿಂದ ನಲವತ್ತು ರೂಪಾಯಿ ಏರಿಕೆಯಾಗಲಿದ್ದು,ಇದು ಮದ್ಯಪ್ರಿಯರಿಗೆ ಶಾಕ್ ಉಂಟಾಗುವಂತಾಗಿದೆ.

ಪ್ರಮುಖ ಮೂರು ಬ್ರ್ಯಾಂಡ್ ಗಳ ದರದಲ್ಲಿ ಏರಿಕೆ ಆಗಿದೆ.ಮದ್ಯದ ಕಂಪನಿಗಳಿಂದ ದರ ಏರಿಕೆ ಮಾಡಲಾಗಿದೆ. ಶೇಕಡಾ 17ರಷ್ಟು ಹೆಚ್ಚಳ‌ ಮಾಡಿರುವ ಬೆನ್ನಲ್ಲೇ ಇದೀಗ ಮತ್ತೆ ಏರಿಕೆ ಮಾಡಲಾಗಿದೆ. 90ರೂಪಾಯಿ ಇದ್ದ ಕ್ವಾಟರ್ ಬೆಲೆ ಇದೀಗ 111ಕ್ಕೆ ಇರಿಸಲಾಗಿದೆ, 110ರೂಪಾಯಿಗೆ ಸಿಗುತ್ತಿದ್ದ ಒಂದು ಕ್ವಾಟರ್ ಬೆಲೆ ಈಗ 145ಕ್ಕೆ ಏರಿಸಲಾಗಿದೆ..

ಮದ್ಯದ ದರ ಏರಿಕೆ ಮಾಡಬಾರದು ಸೇರಿದಂತೆ ವಿವಿಧ ಬೇಡಿಕೆಯನ್ನ ಮುಂದಿಟ್ಟು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮದ್ಯಪ್ರಿಯರು ಪ್ರತಿಭಟನೆಯನ್ನ ಮಾಡಿದ್ದರು, ಆದರೆ ಇದೀಗ ಮದ್ಯಪ್ರಿಯರ ಪ್ರತಿಭಟನೆ ನಡುವೆಯೂ ಕೂಡ ದರ ಏರಿಕೆ ಮಾಡಿರುವುದು ಮದ್ಯಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.