ಸುದ್ದಿಬಿಂದು ಬ್ಯೂರೋ
Karwar ಕಾರವಾರ: ಪ್ರಯಾಣಿಕರನ್ನ ಕರೆದೊಯ್ಯುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ನ (KSRTC bus) ಬ್ಲೇಡ್ ಕಟ್ಟಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡದಲ್ಲಿ ನಡೆದಿದೆ..

ಕಾರಾವಾರ ಬಸ್ ನಿಲ್ದಾಣದಿಂದ ಹಬ್ಬುವಾಡ ಮಾರ್ಗವಾಗಿ ಕೆರವಡಿ ಗ್ರಾಮಕ್ಕೆ ಈ ಬಸ್ ಚಲಿಸುತ್ತಿತ್ತು, ಈ ವೇಳೆ ಹಬ್ಬುವಾಡ ಸಮೀಪ‌ ಹೋಗುತ್ತಿದ್ದಂತೆ ಬಸ್ ಹಿಂಬದಿಯ ಬ್ಲೇಡ್ ಕಟ್ ಆಗಿದ್ದು,ಇದರಿಂದ ಬಸ್ ನ ಹಿಂಬದಿಯ ಚಕ್ರ ಬಸ್ ನಿಂದ ಬೇರ್ಪಟ್ಟಿದೆ. ಬಸ್ ನಲ್ಲಿ ಇದ್ದ ಹಲವರಿಗೆ ಗಾಯವಾಗಿದೆ.

ಬಸ್ ನಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಕಂಡಿಷನ್ ಇಲ್ಲದ ಬಸ್ಸನ್ನ ಒಡಾಡಲು ಬಿಟ್ಟ ಅಧಿಕಾರಿ ಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಪಲ್ಟಿಯಾದ ಹಿನ್ನಲೆ ಕಾರವಾರ ಕೈಗಾ ರಸ್ತೆ ಸಂಚಾರ ಬಂದ್ ಮಾಡಲಾಗಿದೆ..