ಸುದ್ದಿಬಿಂದು ಬ್ಯೂರೋ ವರದಿ
Sirsi: ಶಿರಸಿ : ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಮಗಳ ವಿದ್ಯಾಭ್ಯಾಸಕ್ಕಾಗಿ ಸಂಗ್ರಹಿಸುಟ್ಟಿದ್ದ ಹಣ ಸಹ ಬೆಂಕಿಯಲ್ಲಿ ಸಿಲುಕಿ ಸುಟ್ಟು ಕರಕಲಾಗಿದ್ದ, ಬಡ ಕುಟುಂಬಕ್ಕೆ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ನೆರವಾಗುವ ಮೂಲಕ ಮಾನವೀಯತೆ ತೊರಿದ್ದಾರೆ.

ಶಿರಸಿ ತಾಲೂಕಿನ ನಾಗವೇಣಿ ಉಪ್ಪಾರ ಎಂಬುವವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮೂರು ಹೆಣ್ಣು ಮಕ್ಕಳ‌ ತಾಯಿ ನಾಗವೇಣಿ ಮಕ್ಕಳಿಗಾಗಿ ಕಷ್ಟಪಟ್ಟು ದುಡಿದು ಜೀವನ ನಡೆಸುತ್ತಿದ್ದು,ಆಕೆಯ ಓರ್ವ ಮಗಳಾಗಿರುವ ಶೃದ್ದಾಳ ಎಂಬಾಕೆಯ ಆಸೆಯಂತೆ ಆಕೆಗೆ ಎಂಕಾಂ ಓದಿಸಬೇಕೆಂದು ತಾಯಿ ನಾಗವೇಣಿ ತಾನು ದುಡಿದ ಹಣದಲ್ಲಿ ಅಲ್ಪ ಸ್ವಲ್ಪ ಸಂಗ್ರಹಿಸಿ 40 ಸಾವಿರ ಹಣ ಮಗಳ ವಿದ್ಯಾಭ್ಯಸಕ್ಕಾಗಿ ಕೂಡಿಟ್ಟಿದ್ದಳು.ಆದರೆ ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿದ್ದರಿಂದ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.ಇದರಿಂದಾಗಿ ಮಗಳ ವಿಧ್ಯಾಭ್ಯಾಕ್ಕಾಗಿ ಸಂಗ್ರಹಿಸಿಟ್ಟ. 40 ಸಾವಿರ ಹಣ ಸಹ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿ ಸುಟ್ಟು ಭಸ್ಮವಾಗಿದೆ.

ಮನೆ ಕಳೆದುಕೊಂಡಿರುವುದಕ್ಕಿಂತ ಮಗಳ ವಿಧ್ಯಾಭ್ಯಸಕ್ಕಾಗಿ ಸಂಗ್ರಹಿಸಿಟ್ಟ ಹಣ ನೋಡ ನೋಡುತ್ತಿರುವಾಗಲೇ ಬೆಂಕಿಯಲ್ಲಿ ಸುಟ್ಟು ಕರಕಲಾಯಿತಲ್ಲ ಎಂದು ಹೆತ್ತ ತಾಯಿ ನಾಗವೇಣಿ ಚಿಂತೆಗೆ ಒಳಗಾಗಿದ್ದಳು. ಈ ಬಗ್ಗೆ ಸುದ್ದಿ ತಿಳಿದ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ‌ ಭೀಮಣ್ಣ‌ ನಾಯ್ಕ ಅವರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ‌ ನಾಗವೇಣಿ ಮಗಳ ವಿಧ್ಯಾಭ್ಯಸಕ್ಕಾಗಿ ಸಂಗ್ರಹಿಸಿಟ್ಟ‌‌ 40ಸಾವಿರ ಹಣವನ್ನ ಸ್ಥಳದಲ್ಲೆ ನೀಡಿದ್ದಾರೆ. ಅಷ್ಟೆ ಅಲ್ಲದೆ‌ ಆಕೆಯ ಮುಂದಿನ ಶಿಕ್ಷಣಕ್ಕೆ‌ ಎಲ್ಲಾ ರೀತಿಯ ಸಹಾಯದ ಜೊತೆ ಸರಕಾರದಿಂದ‌ ಮನೆ‌ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.ಶಾಸಕರ ಕಾರ್ಯದ ಬಗ್ಗೆ ಎಲ್ಲಡೆಯಿಂದ ಶ್ಲಾಘನೆ ವ್ಯಕ್ತವಾಗತ್ತಿದೆ.

ಗಮನಿಸಿ