Karwar:ಕಾರವಾರ: ಉದ್ಯೋಗಿಗಳನ್ನ ಕರೆದೋಯ್ಯುತ್ತಿದ್ದ ಖಾಸಗಿ ಬಸ್ ಒಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಬಸ್ ಸಂಪೂರ್ಣವಾಗಿ ಸುಟ್ಟುಕರಕಲಾಗಿ, ಬಸ್‌ನಲ್ಲಿದ್ದ ಉದ್ಯೋಗಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕೈಗಾ ಸಮೀಪದ ವಿರ್ಜೆ ಸಮೀಪ ನಡೆದಿದೆ‌.

ಕೈಗಾಯಿಂದ ಮಲ್ಲಾಪುರ ಟೌನ್‌ಶಿಪ್‌‌ಗೆ ಉದ್ಯೋಗಿಗಳನ್ನ ಖಾಸಗಿ ಬಸ್‌ನಲ್ಲಿ  ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ‌ ಬಸ್‌‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅದರಲ್ಲಿದ್ದ ಪ್ರಯಾಣಿಕರು ತಕ್ಷಣ ಹೊರ ನಡೆದು ಜೀವ ರಕ್ಷಿಸಿಕೊಂಡಿದ್ದಾರೆ.

ಬೆಂಕಿ ಬಿದ್ದಿರುವ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ‌ ಸಿಬ್ಬಂದಿಗಳು ಆಗಮಿಸಿ ಬೆಂಕಿ‌ನದಿಸಲು ಹರಸಾಹಸ ಪಟ್ಟಿದ್ದಾರೆ.ಆದರೆ ಭಾರೀ ಪ್ರಮಾಣದಲ್ಲಿ  ಬೆಂಕಿ‌ ಹೊತ್ತಿಕೊಂಡಿರುವುದರಿಂದ ವಿಕಾಶ ಟ್ರಾವೇಲ್ಸ್ ಬಸ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ.ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗಮನಿಸಿ