suddibindu.in
ಕುಮಟಾ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿಯಲ್ಲಿ ಬಹುಕೋಟಿ ವೆಚ್ಚದ ಅನುದಾನದಲ್ಲಿ ತಾಲೂಕಿನಾದ್ಯಂತ ಕೈಗೊಂಡಿರುವ ಈ ಯೋಜನೆಯನ್ನು ಜಲಮೂಲ ಇಲ್ಲದೇ ಪೈಪ್ ಲೈನ್ ಮಾಡಲಾಗಿದ್ದು, ಅಧಿಕಾರಿಗಳ ಹಾಗೂ ಗುತ್ತಿಗೆದಾರರಿಗೆ ಇದು ಜಾತ್ರೆಯಾಗಿದೆ.
ಈಗಾಗಲೇ ಕುಮಟಾ ತಾಲೂಕಿನಾದ್ಯಂತ ಬಹುತೇಕ ಹಳ್ಳಿಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯ (ಕುಡಿಯುವ ನೀರಿನ ಯೋಜನೆ) ಕಾಮಗಾರಿ ಪೂರ್ಣವಾಗಿ ಕೆಲ ವರ್ಷಗಳೇ ಕಳೆದು ಹೋಗಿದೆ. ಯೋಜನೆಗೆ ಬಂದ ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಲ್ಲಿಯಲ್ಲಿ ನೀರು ಬರುವ ಮೊದಲೇ ಆ ಹಣವನ್ನು ನುಂಗಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.
ಇದನ್ನೂ ಓದಿ
- ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ ಮಂಗಳೂರಿಗೆ ಸ್ಥಳಾಂತರಿಸುವ ಕ್ರಮ ಸರಿಯಲ್ಲ
- ಅನಂತಮೂರ್ತಿ ಹೆಗಡೆ ಪ್ರತಿಭಟನೆಗೆ ಸ್ಥಳದಲ್ಲೆ ಆದೇಶಿಸಿದ ಡಿಸಿ
- ಭಾರತ್ ಸೈನ್ಯಕ್ಕೆ ಬೆಚ್ಚಿಬಿದ್ದ ಪಾಕ್ : 5 ಸಾವಿರ ಸೈನಿಕರ ರಾಜೀನಾಮೆ
ಯೋಜನೆಗೆ ಸಂಬಂಧಿಸಿ ಅಧಿಕಾರಿಗಳನ್ನು ಕೇಳಿದರೆ ಇದು ನಮ್ಮ ಕಾರ್ಯವ್ಯಾಪ್ತಿಗೆ ಬರೋದಿಲ್ಲ ಎನ್ನುತ್ತಿದ್ದಾರೆ. ಕೆಲ ಅಧಿಕಾರಿಗಳಂತೂ ಈ ಕಾಮಗಾರಿಯ ಹಣ ನುಂಗುವುದಕ್ಕಾಗಿಯೇ ಕಾಮಗಾರಿ ನಡೆಯುವ ಸ್ಥಳಕ್ಕೆ ವರ್ಗವಾಗಿ ಬಂದಿದ್ದಾರೆ. ಇನ್ನು ಕೆಲ ಅಧಿಕಾರಿಗಳು ಕಾಮಗಾರಿಯ ಪೈಪ್ ಲೈನ್ ಮುಗಿಸಿ ನೀರು ಕೊಡುವ ಮೊದಲ ಯೋಜನೆಗೆ ಬಂದ ಹಣವನ್ನು ಗುತ್ತಿಗೆದಾರರು, ಅಧಿಕಾರಿಗಳು ಸೇರಿ ನೀರು ಕುಡಿದಂತೆ ಎಲ್ಲವನ್ನು ನುಂಗಿ ಬೇರೆಡೆ ವರ್ಗಾವಣೆಯಾಗಿ ಹೋಗಿದ್ದಾರೆ.
ಬಳಿಕ ಬಂದ ಅಧಿಕಾರಿಗಳನ್ನು ಕೇಳಿದರೆ “ಅದು ನಾವು ಇರುವಾಗ ನಡೆದ ಕಾಮಗಾರಿ ಅಲ್ಲ. ಹಿಂದಿನವರು ಮಾಡಿ ಹೋಗಿದ್ದು” ಎನ್ನುವ ಸಿದ್ಧ ಉತ್ತರ ಸಿಗುತ್ತಿದೆ. ಆದರೆ ಹಿಂದಿನ ಅಧಿಕಾರಿಗಳು ಯೋಜನೆಯ ಹಣ ನುಂಗಿರುವುದಲ್ಲದೆ ದಾಖಲೆಗಳನ್ನು ನುಂಗಿ ಹೋಗಿದ್ದಾರಾ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುವಂತಾಗಿದೆ. ಈಗಾಗಲೇ ತಾಲೂಕಿನಾದ್ಯಂತ ಬಹುತೇಕ ಹಳ್ಳಿಗಳ ಮನೆ ಎದುರು ಪೈಪ್ ಲೈನ್ ಕಾಣಸಿಗುತ್ತದೆಯೇ ಹೊರತು ಹನಿ ನೀರು ಇನ್ನೂ ಬಂದಿಲ್ಲ.
ಜನರ ಮೌನವೇ ಯೋಜನೆ ಹಳ್ಳ ಹಿಡಿಯಲು ಕಾರಣ.
ಈ ಯೋಜನೆ ಪೂರ್ಣಗೊಂಡು ವರ್ಷ ಕಳೆದರೂ ನೀರು ಯಾಕೆ ಇನ್ನೂ ಬಂದಿಲ್ಲ ಎಂದು ಅಧಿಕಾರಿಗಳನ್ನಾಗಲಿ, ಗುತ್ತಿಗೆದಾರರನ್ನಾಗಲಿ ಜನ ಸಾಮಾನ್ಯರು ಪ್ರಶ್ನೆ ಮಾಡದೆ ಇರುವುದೆ ನಲ್ಲಿಯಲ್ಲಿ ನೀರು ಕೊಡದೆ ನೀರಿನ ಯೋಜನೆಗಾಗಿ ಬಂದ ಹಣವನ್ನು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸೇರಿಕೊಂಡು ಕೊಳ್ಳೆಹೊಡೆಯಲು ಕಾರಣ ಆಗಿರುವಂತಿದೆ. ಇಷ್ಟೊತ್ತಿಗಾಗಲೆ ಜನ ಧ್ವನಿ ಎತ್ತಿದ್ದರೆ ಹನಿ ನೀರಾದರೂ ಸಿಗುತ್ತಿತ್ತು. ಇನ್ನು ಇಲ್ಲಿರುವ ಒಂದಿಷ್ಟು ಹೋರಾಟಗಾರರು ಆಗೊಮ್ಮೆ ಈಗೊಮ್ಮೆ ಗದ್ದಲ ಮಾಡಿದ ಹಾಗೆ ಮಾಡಿ ಅವರು ಸಹ ಯೋಕೋ ಏನೋ ಎರಡು ದಿನದಲ್ಲಿ ತಮ್ಮ ಹೋರಾಟ ನಿಲ್ಲಿಸಿ ಬಿಡುತ್ತಾರೆ. ಇಂತಹ ಯೋಜನೆ ಬಂದರೆ ಸ್ವ-ಘೋಷಿತ ಹೋರಾಟಗಾರರಿಗೂ ಒಂದು ರೀತಿಯಲ್ಲಿ ಲಾಭ ಇರುವಂತೆ ಕಂಡು ಬರುತ್ತಿದೆ.
ಏನೇ ಈರಲಿ ಈ ಯೋಜನೆಯಿಂದ ಗ್ರಾಮೀಣ ಜನರಿಗೆ ನೀರು ಸಿಗಲಿ ಎನ್ನುವುದು ಬಹುತೇಕ ಗ್ರಾಮಸ್ಥರ ಬೇಡಿಕೆ. ಆದರೆ ಇದು ಈಡೇರುವುದು ಮರೀಚಿಕೆ ಎನ್ನುವುದು ಅನೇಕರ ಅನಿಸಿಕೆ.