ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಸದಾ ಸಿನಿಮಾ ಚಿತ್ರಿಕರಣದಲ್ಲಿ ಬ್ಯೂಜಿಯಾಗಿರುತ್ತಿದ್ದ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ(hatric Hero ShivrajKumar) ಅವರಿಗೆ ಇದೀಗ ಅನಾರೋಗ್ಯ ಸಮಸ್ಯೆ ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶೀಘ್ರವೇ ಅಮೇರಿಕಾ ತೆರಳಲಿದ್ದಾರೆ ಶಿವಣ್ಣ.
ತನ್ನ ಆರೋಗ್ಯ ಸಮಸ್ಯೆ ಇರುವು ಬಗ್ಗೆ ಶಿವಣ್ಣ ಅವರೆ ಹೇಳಿಕೊಂಡಿದ್ದಾರೆ. ಮನುಷ್ಯರಾದ ಮೇಲೆ ಕಾಯಿಲೆ ಬರೋದು ಸಹಜ ಅದನ್ನ ಯಾವ ಕಾರಣಕ್ಕೂ ಮುಚ್ಚಿಟ್ಟುಕೊಳ್ಳಬಾರದು ಅಂತಾ ಶಿವಣ್ಣ ಹೇಳಿದ್ದಾರಂತೆ. ಹೀಗಾಗ ಅನಾರೋಗ್ಯದ ವಿಚಾರವನ್ನ ಅವರು ತಮ್ಮ ಆಪ್ತರ ಬಳಿ ಹಂಚಿಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ಇರಲಿದ್ದು, ಆ ಕಾರಣಕ್ಕಾಗಿ ಅವರು ಅಮೇರಿಕಾ ತೆರಳಲಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ದಿ.ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಶಿವರಾಜ್ ಕುಮಾರ ಹಾಗೂ ಪತ್ನಿ ಗೀತಾಶಿವರಾಜ್ ಕುಮಾರ ಅವರು ಶಿರಸಿಗೆ ಆಗಮಿಸಿ ಬಂಗಾರಪ್ಪ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.ಅಂದು ತಮ್ಮ ಆರೋಗ್ಯದ ಸಮಸ್ಯೆ ವಿಚಾರವನ್ನ ಸಂಬಂಧಿಕರ ಬಳಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ಬಹುನಿರೀಕ್ಷಿತ ಭೈರತಿ ರಣಗಲ್ ಬಿಡುಗಡೆಗೆ ಸಜ್ಜಾಗಿದೆ. ಅರ್ಜುನ್ ಜನ್ಯ ನಿರ್ದೇಶನದ 45, ಹೇಮಂತ್ ರಾವ್ ನಿರ್ದೇಶನದ ಭೈರವನ ಕೊನೆ ಪಾಠ, ತಮಿಳು ನಿರ್ದೇಶಕನ ಜೊತೆ ಹೆಸರಿಡದ ಚಿತ್ರ.. ಹೀಗೆ 8 ರಿಂದ 10 ಸಿನಿಮಾಗಳು ಬುಕ್ಕಿಂಗ್ ಆಗಿವೆ. ಇಷ್ಟು ಸಿನಿಮಾಗಳಲ್ಲಿ ಸದ್ಯ ಭೈರತಿ ರಣಗಲ್ ಬಿಡುಗಡೆ ಆಗಲು ಸಜ್ಜಾಗಿದ್ರೆ, ’45’ ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಅಮೆರಿಕಕ್ಕೆ ತೆರಳುತ್ತಿದ್ದಾರೆ. ವರ್ಷದಿಂದ ಮನೆಯಲ್ಲೇ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು.
ಭೈರತಿ ರಣಗಲ್ ಚಿತ್ರ ಬಿಡುಗಡೆ ಆದ ಬಳಿಕ, ಬಹುಶಃ ಇದೇ ನವೆಂಬರ್ ಕೊನೆಗೆ ಅಥವಾ ಡಿಸೆಂಬರ್ ತಿಂಗಳಲ್ಲಿ ಶಿವರಾಜ್ಕುಮಾರ್, ಪತ್ನಿ ಗೀತಾ ಸೇರಿದಂತೆ ಕೆಲ ಸ್ನೇಹಿತರು, ಕುಟುಂಬಸ್ಥರು ಅಮೆರಿಕಕ್ಕೆ ತೆರಳಲಿದ್ದಾರೆ. ಒಂದು ತಿಂಗಳ ಕಾಲ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಗಮನಿಸಿ
- Fengal Cyclone:ಫೆಂಗಲ್ ಚಂಡಮಾರುತ ಹಿನ್ನಲೆ : ನಾಳೆ ಶಾಲಾ-ಕಾಲೇಜಿಗೆ ರಜೆ ಘೋಷಿಸಿದ ಡಿಸಿ
- Earthquake Clarification/ಭೂ ಕಂಪನದ ಬಗ್ಗೆ ರಿಕ್ಟರ್ ಮಾಪಕದಲ್ಲಿ ಯಾವುದೇ ದಾಖಲೆ ಇಲ್ಲ
- ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ : ಮನೆ ಬಿಟ್ಟು ಓಡಿದ ಜನ