suddibindu.in
ಕುಮಟಾ : ಗೋಕರ್ಣ ಕಡೆಯಿಂದ ಕುಮಟಾ ಕಡೆ ಚಲಿಸುತ್ತಿದ್ದ ಕಾರ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆಸ ಘಟನೆ ಮಿರ್ಜಾನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಬೈಕ್ ಸವಾರ ಹೆದ್ದಾರಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ನೀರು ಕುಡಿಯುತ್ತಿದ್ದ ಎನ್ನಲಾಗಿದೆ. ಈ ವೇಳೆ ಗೋಕರ್ಣ ಕಡೆಯಿಂದ ಅತೀ ವೇಗವಾಗಿ ಕುಮಟಾ ಕಡೆ ಚಲಿಸುತ್ತಿದ್ದ‌ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬಳಿಕ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲ ಎನ್ನಲಾಗಿದೆ. ಇನ್ನೂ ಸ್ಥಳೀಯ ಮುಖಂಡರು ಕಾರ ಚಾಲಕನೊಂದಿಗೆ ಮಾತುಕತೆ ಮಾಡಿ ಜಖಂಗೊಂಡಿರುವ ಬೈಕ್‌ನ ಹಾನಿ ತುಂಬಿಕೊಂಡುವುದಾಗಿ ಹೇಳಿದ್ದಾರೆನ್ನಲಾಗಿದೆ.