suddibindu.in
SIRSI:ಶಿರಸಿ : ಚಲಿಸುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದು ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಸಿ ನಗರದ ಪಂಚವಟಿ ಸಮೀಪ ನಡೆದಿದೆ.

ಅಪಘಾತದಲ್ಲಿ ಬೈಕ್ ಸವಾರ ಸಂದೀಪ್ ಈಶ್ವರ ಚಲವಾದಿ(24) ಮೃತ ಯುವಕನಾಗಿದ್ದಾನೆ.ಇನ್ನೂ ಸಹ ಸವಾರ ಸುಭಾಷ ಮಂಜುನಾಥ ದೇವಾಡಿಗ (26). ಗಂಭೀರ ಗಾಯಗೊಂಡಿದ್ದಾನೆ. ಇವರು ರಾತ್ರಿ ವೇಳೆ ತಮ್ಮ ಬೈಕ್ ಮೇಲೆ ಬೇರೆ ಒಬ್ಬರಿಗೆ ಕರೆದುಕೊಂಡು ಶಿರಸಿ ಬಸ್ ನಿಲ್ದಾಣಕ್ಕೆ ಬಿಟ್ಟು ಬರಲು ಹೋಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ

ಆತನಿಗೆ ಬಸ್ ನಿಲ್ದಾಣದಲ್ಲಿ ಬಿಟ್ಟು ವಾಪಸ್ ಬರುತ್ತಿರುವ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ರಾಜಕಾಲುವೆಯಲ್ಲಿ ಪಲ್ಟಿಯಾಗಿದೆ. ಇದರಿಂದಾ ಓರ್ವ ಸ್ಥಳದಲ್ಲೆ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡವನಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಂಭೀರ ಗಾಯವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತ ನಡೆದಿರುವ ಬಗ್ಗೆ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.