www.suddibindu.in
ಭಟ್ಕಳ: ಗಣೇಶ ಮೂರ್ತಿ ವಿಸರ್ಜನೆಯ ವೇಳೆಯಲ್ಲಿ ಸಮುದ್ರದಲ್ಲಿ ಕೊಚ್ಚಿಹೋದ ಬಾಲಕನೋರ್ವನನ್ನು ಕರಾವಳಿ ಕಾವಲು ಪಡೆಯ ಕೆ.ಎನ್.ಡಿ. ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತಾಲೂಕಿನ ತಲಗೋಡಿನಲ್ಲಿ ನಡೆದಿದೆ.

ತಲಗೋಡ ಸಾರ್ವಜನಿಕರು ಪ್ರತಿಷ್ಟಾಪಿಸಿದ ಗಣೇಶ ಮೂರ್ತಿಯನ್ನು ವಿಸರ್ಜನಾ ಮೆರವಣಿಗೆಯ ಮೂಲಕ ಸಮುದ್ರದಲ್ಲಿ ವಿಜಸರ್ಜನೆ ಮಾಡುವ ವೇಳೆಯಲ್ಲಿ ಸಮರ್ಥ ಶ್ರೀಧರ ಖಾರ್ವಿ (14) ಎಂಬಾತನೆ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ್ದ ಬಾಲಕನಾಗಿದ್ದ.

ತಕ್ಷಣ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಸಿಪಿಐ ಕುಸುಮಾಧರ ಕೆ., ಮಾರ್ಗದರ್ಶನದಲ್ಲಿ ಕೆ.ಎನ್.ಡಿ. ಸಿಬ್ಬಂದಿ ರಾಘವೇಂದ್ರ ನಾಯ್ಕ, ಸಚಿನ್ ಖಾರ್ವಿ ಸಮುದ್ರಕ್ಕೆ ಜಿಗಿದು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ತಕ್ಷಣ ಬಾಲಕನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ