ಸುದ್ದಿಬಿಂದು ಬ್ಯೂರೋ
ಕಾರವಾರ
: ಕಾಂತಾರ ಸಿನೆಮಾದಲ್ಲಿ (Kantara Movie) ಹಂದಿಯನ್ನ ಜನ ಪಂಜುರ್ಲಿ (Panjurli )ದೈವದ ರೂಪದಲ್ಲಿ ಅದನ್ನ ನೋಡಿದ್ದರು. ಆದರೆ ಆ ಸಿನೆಮಾದ ಬಳಿಕ ಪ್ರತಿನಿತ್ಯವೂ ಊರಿಗೆ ಬರುತ್ತಿದ್ದ ಆ ಗ್ರಾಮದ ಜನರ ಪಂಜುರ್ಲಿಯಂತಾಗಿದ್ದ ಹಂದಿಯನ್ನ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ವ್ಯಕ್ತಿ ಓರ್ವ ನಾಡಬಾಂಬ್ ಇಟ್ಟು ಸ್ಪೋಟ ಮಾಡಿ ಹಂದಿಯನ್ನ ಹತ್ಯೆ ಮಾಡಿರುವುದು ಇದೀಗ ಗ್ರಾಮಕ್ಕೆ ಗ್ರಾಮವೆ ಶೋಕಾಚರಾಣೆಯಲ್ಲಿ ಮುಳುಗುವಂತಾಗಿದೆ.

ಹಂದಿ ಭೇಟಯಾಡಿದ ಚೆಂಡಿಯಾ ಗ್ರಾಮದ ಸಿಫ್ರಮ್ ಪರ್ನಾಂಡಿಸ್ ಎಂಬಾತನಿಗೆ ಈಗಾಗಲೆ‌ ಪೊಲೀಸರು ವಶಕ್ಕೆ ಪಡೆದಿದ್ದು,ನಾಡಬಾಂಬ್ ಉಪಯೋಗಿಸುತ್ತಿದ್ದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಾಂಬ್ ಸ್ಕಾಡ್ ತಂಡ ಜೀವಂತ ನಾಡ ಬಾಂಬ್ ಸ್ಪೋಟಿಸಿದ್ದಾರೆ.
ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ಕಾಡು ಹಂದಿಯೊಂದು ಕಳೆದ ನಾಲ್ಕೈದು ತಿಂಗಳಿಂದ ಅನ್ಯೋನ್ಯವಾಗಿ.ಯಾರಿಗೂ ಸಹ ಉಪದ್ರನೀಡದೆ ಸಲುಗೆಯಿಂದ ಇರತ್ತಾ ಇತ್ತು.ಈ ಹಂದಿ ಚೆಂಡಿಯಾ ಗ್ರಾಮದಲ್ಲಿನ ಎಲ್ಲರ ಮನೆಯ ಕುಟುಂಬ ಸದಸ್ಯರಂತೆ ಇತ್ತು.ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿ ತನಕ ಚೆಂಡಿಯಾ ಗ್ರಾಮದ ಸುತ್ತಮುತ್ತಲು ಇರುವ ಮನೆ ಮನೆಗೂ ತೆರಳಿ ಉಟೋಪಚಾರ ಸೇವಿಸುತ್ತಿದ್ದ ಕಾಡು ಹಂದಿಯನ್ನ ಅಲ್ಲಿನ ಪ್ರತಿಯೊಬ್ಬರೂ ಪ್ರೀತಿ ಮತ್ತು‌ ದೈವತಾಭಾವದಿಂದ ನೋಡಿಕೊಳ್ಳುತ್ತಿದ್ದರು.ಆದರೆ ಆ ದೈವರೂಪದ ಹಂದಿ ಕಟುಕರು ಇಟ್ಟ ನಾಡ್ ಬಾಂಬ್ ಕಚ್ಚಿ ಸಾವು ಕಾಣುವಂತಾಗಿದೆ.

ದಿನ ನಿತ್ಯವೂ ಹಂದಿ ಓಡಾಡುತ್ತಿರುವುದನ್ನ ಗಮನಿಸಿದ್ದ ಕಟುಕರು ಹಂದಿ ಕೊಂದಬೇಕು ಎಂದು ಸ್ಕೆಚ್ ಹಾಕಿದ್ದು, ಕೋಳಿಮಾಂಸದಲ್ಲಿ ನಾಡ ಬಾಂಬ್ ಇಟ್ಟು ಹತ್ಯೆ ಮಾಡಿದ್ದಾರೆ.ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಕಾಡುಹಂದಿಯನ್ನ ಕಳೆದುಕೊಂಡವರಿಂದ ಚೆಂಡಿಯಾ ಗ್ರಾಮದ ಪ್ರತಿಯೊಬ್ಬರು ಕಣ್ಣೀರು ಹಾಕುವಂತಾಗಿದೆ.

ಕುಟುಂಬಸ್ಥರನ್ನ ಕಳೆದುಕೊಂಡಷ್ಟು ನೋವಾಗಿದೆ.
ಕಟುಕರ ಕೈಗೆ ಸಿಕ್ಕಿ ಸಾವು ಕಂಡಿರುವ ಹಂದಿ ಪ್ರತಿದಿನ ನಮ್ಮ ಮನೆಗೆ ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಬರತ್ತಾ ಇತ್ತು‌. ನಾವು ತಿನ್ನುವುದನ್ನೆ ಅದಕ್ಕೂ ಕೊಡತ್ತಾ ಇದ್ದವು. ಹಂದಿಯನ್ನ ನಾವು ದೇವರ ರೂಪದಲ್ಲಿ ನೋಡತ್ತಾ ಇದ್ದೇವು.ಇದು ಯಾರಿಗೂ ಸಹ ಉಪಟಳ ನೀಡತ್ತಾ ಇರಲಿಲ್ಲ.ಆದರೆ ನಿತ್ಯವೂ ನಮ್ಮ ಮನೆಗೆ ಬರುತ್ತಿದ್ದ ದೈವ ರೂಪದ ಹಂದಿ ಬರದೆ ಇದ್ಗಾಗ ನಾವೇಲ್ಲಾ ಹಂದಿ ಯಾಕೆ ಬಂದಿಲ್ಲ ಎಂದು ಹುಡುಕಾಟ ನಡೆಸಿದ್ದೇವೆ. ಆದರೆ ಕೊನೆಗೆ ನಮ್ಮಗೆ ಗೊತ್ತಾಯತ್ತು.ಯಾರೋ ಕಟುಕರು ಹಂದಿನ್ನ ಬಾಂಬ್ ಇಟ್ಟು ಸಾಯಿಸಿದ್ದಾರೆ ಎಂದು. ಈಗ ನಮ್ಮ‌ಮನೆಯ ಸದಸ್ಯರನ್ನೆ ಕಳೆದುಕೊಂಡಷ್ಟು ನೋವಾಗುತ್ತಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮ‌ಕೈಗೊಳ್ಖಬೇಕು ಎಂದು ಚೆಂಡಿಯಾ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.