ಸುದ್ದಿಬಿಂದು ಬ್ಯೂರೋ‌ ವರದಿ
Hubli/ಹುಬ್ಬಳ್ಳಿ: ಸಂತೋಷ್‌ನಗರದಲ್ಲಿ ಐದು ವರ್ಷದ ಬಾಲಕಿಯನ್ನ ಅಪಹರಿಸಿ ಕೊಲೆ ಮಾಡಿದ ಆರೋಪಿ ಕಾಲಿಗೆ ಪೊಲೀಸರು ಹೊಡೆದಿದ್ದಾರೆ. ಆದರೆ ಗಂಭೀರ ರಕ್ತಸ್ರಾವದಿಂದಾಗಿ ಆರೋಪಿ ಸಾವನ್ನಪ್ಪಿದ್ದಾನೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದಂಪತಿ ಹುಬ್ಬಳ್ಳಿಯಲ್ಲಿ ವಾಸವಾಗಿದ್ದರು. ತಂದೆ ಪೇಟಿಂಗ್ ಕೆಲಸ ಮಾಡುತ್ತಿದ್ದರು, ತಾಯಿ ಮನೆಯಲ್ಲಿ ಕೆಲಸ ಮಾಡಿ, ಮಧ್ಯಾಹ್ನದ ವೇಳೆಗೆ ಬ್ಯೂಟಿ ಪಾರ್ಲರ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದವರು.

ಪ್ರತಿದಿನದಂತೆ ಕೆಲಸಕ್ಕೆ ಹೋಗಿ ಹಿಂದಿರುಗಿದಾಗ, ಅವರ ಐದು ವರ್ಷದ ಮಗಳು ಕಾಣೆಯಾಗಿದ್ದಳು. ತಕ್ಷಣ ತಾಯಿ ಪತಿಗೆ ಕರೆ ಮಾಡಿ ಹುಡುಕಲು ಪ್ರಾರಂಭಿಸಿದರು. ನಂತರ, ಮನೆಯಿಂದ ಸ್ವಲ್ಪ ದೂರದ ಶೌಚಾಲಯದಲ್ಲಿ ಮಗುವಿನ ಶವ ಪತ್ತೆಯಾಗಿತ್ತು.

ಘಟನೆ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣ ಸಾರ್ವಜನಿಕರು ಠಾಣೆಯ ಎದುರು ಪ್ರತಿಭಟನೆ ನಡೆಸಿ, “ಆರೋಪಿಯನ್ನು ನಮಗೆ ಒಪ್ಪಿಸಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುರ್ದೈವದ ಪೋಷಕರು ಕಿಮ್ಸ್ ಆಸ್ಪತ್ರೆಯ ಮುಂದೆ ನಿಂತು “ನಮ್ಮ ಮಗಳನ್ನು ನಮಗೆ ಕೊಡಿ” ಎಂದು ಅಳಿದರು. ಈ ನಡುವೆ, ಕಠಿಣ ಶಿಕ್ಷೆಗೆ ಒತ್ತಾಯವಾದ ಕೆಲವು ಗಂಟೆಗಳಲ್ಲೇ ಆರೋಪಿಯು ಸಾವನ್ನಪ್ಪಿದ್ದಾನೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರ ಈ ಕಾರ್ಯ ಜನಮೆಚ್ವುಗೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಹತ್ಯೆಗೀಡಾಗಿದ್ದ ಮಗಳ ಆತ್ಮಕ್ಕೆ ಶಾಂತಿ ದೊರಕಿದೆ ಎಂದು ಪಾಲಕರು ಹೇಳುವಂತಾಗಿದೆ.

ಇದನ್ನೂ ಓದಿ