ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ಹೊಸ ಮನೆಗೆ ಕ್ಯೂರಿಂಗ್ ಸಲುವಾಗಿ ನೀರು ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ಇಂದು ನಡೆದಿದೆ.
ಮೂಲತ: ಜಾರ್ಖಂಡ್ ನವರಾಗಿದ್ದ ಕಳೆದ ಹತ್ತು ವರ್ಷಗಳಿಂದ ನಗರದ ನಿವಾಸಿಯಾಗಿದ್ದು ಟೈಲ್ಸ್ ಫಿಟ್ಟಿಂಗ್ ಗುತ್ತಿಗೆದಾರರಾಗಿರುವ ಅಲಿ ಅನ್ಸಾರಿ (40) ಇವರು ಅಲೈಡ್ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮನೆಗೆ ಕ್ಯೂರಿಂಗ್ ಮಾಡುವ ಸಲುವಾಗಿ ನೀರು ಹಾಕುತ್ತಿರುವಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು,ಮೃತರ ಕುಟುಂಬಸ್ಥರ ಹಾಗೂ ಬಂಧು ಮಿತ್ರರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸರಳ ಸಜ್ಜನಿಕೆಯ ಹಾಗೂ ಸರ್ವಧರ್ಮ ಸಮನ್ವಯತೆಯ ಪ್ರತಿಪಾದಕರಾಗಿದ್ದ ಅಲಿ ಅನ್ಸಾರಿ ಅವರ ಅಕಾಲಿಕ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ