ಸುದ್ದಿಬಿಂದು ಬ್ಯೂರೋ
ಕಾರವಾರ : ನಾನು ಶಾಸಕನಾಗಿ ಆಯ್ಕೆ ಆದಲ್ಲಿ ಜಿಲ್ಲೆಯ ಬಹುಜನರ ಅತ್ಯವಶ್ಯಕವಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಬೇಕಾಗುವ ಸ್ಥಳವನ್ನ ಉಚಿತವಾಗಿ ನೀಡುವುದಾಗಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಜನರು ಯಾವುದೇ ಕಾಯಿಲೆ ಅಥವಾ ಅಪಘಾತಕ್ಕೆ ಒಳಗಾದ ಸಮಯದಲ್ಲಿ ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಕೂಗು ಕೇಳಿ ಬರುತ್ತಲೆ ಇದೆ‌. ಆರಂಭದಲ್ಲಿ ಸಹ ಸೈಲ್ ಅವರು ಕುಮಟಾ ಸಮೀಪದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಅದು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.ಈ ಬಗ್ಗೆ ಸತತವಾಗಿ ಪ್ರಯತ್ನ ಸಹ ನಡೆಸಲಾಗುತ್ತಿತ್ತು.. ಸಮಸ್ಯೆ ಬಗ್ಗೆ ತಿಳಿದಿಕೊಂಡಿರುವ ಸತೀಶ್ ತಾನು ಶಾಸಕನಾದ ಬಳಿಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನ ಮಂಜೂರಿ ಮಾಡಿಸುವ ಮೂಲಕ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಸ್ಥಳವನ್ನ ಉಚಿತವಾಗಿ ನೀಡುವುದಾಗಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.

ಇನ್ನೂ ಇದರ ಜೊತಗೆ ಜಿಲ್ಲೆಯ ಯುವಕರು ನಿರುದ್ಯೋಗ ಸಮಸ್ಯೆಯನ್ನ ಅನೇಕ ವರ್ಷದಿಂದ ಎದುರಿಸುತ್ತಿದ್ದು, ಕ್ಷೇತ್ರಕ್ಕೆ ವಿವಿಧ ಕೈಗಾರಿಕೆಗಳನ್ನ ಬರುವಂತೆ ನೋಡಿಕೊಂಡು ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿಸುವುದಾಗಿ ಸಹ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ