suddibindu.in
Honnavr :ಹೊನ್ನಾವರ : ತಾಲೂಕಿನ ಹೊದ್ಕೆ ಶಿರೂರಿನ ಸರಕಾರಿ ಫ್ರೌಡ ಶಾಲೆಯ ಶಿಕ್ಷಕನೋರ್ವ ವಿದ್ಯಾರ್ಥಿನಿ (Student) ಓರ್ವಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿನಿಯ ಪಾಲಕರು ಶಿಕ್ಷಣ ಇಲಾಖೆಯ (Department of Education) ಅಧಿಕಾರಿಗಳಿಗೆ ದೂರು ನೀಡಿದ ಬೆನ್ನಲ್ಲೆ ಇದೀಗ ಅದೇ ಶಾಲೆಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದಾರೆ..
ಇದನ್ನೂ ಓದಿ:-ಮಂಗನಕಾಯಿಲೆ ಜಿಲ್ಲೆಯಲ್ಲಿ ಮೊದಲ ಬಲಿ
ಕಳೆದ ಕೆಲ ದಿನಗಳ ಹಿಂದೆ ಶಾಲೆಯಲ್ಲಿ ಪಾಲಕರ ಸಭೆ ನಡೆಸಲಾಗಿದ್ದು, ಇದೀಗ ಶಿಕ್ಷಕನ ಕಿರುಕುಳಕ್ಕೆ ಒಳಗಾಗಿರುವ ವಿದ್ಯಾರ್ಥಿನಿಯ ತಂದೆ ಶಾಲೆಯಲ್ಲಿ ಮೊಟ್ಟೆ ವಿತರಣೆ ವಿಚಾರಕ್ಕೆ ಸಂಬಂಧಿಸಿ ಕೆಲವೊಂದು ಪ್ರಶ್ನೆಗಳನ್ನ ಕೇಳಿದ್ದರು ಎನ್ನಲಾಗಿದೆ, ಇದೇ ಕಾರಣಕ್ಕೆ ಯಾವ ಪಾಲಕರು ಪ್ರಶ್ನೆ ಮಾಡಿದ್ದರೋ ಅವರ ಮಗಳನ್ನೆ ಶಿಕ್ಷಕ ಟಾರ್ಗೆಟ್ (Target)ಮಾಡಿದ್ದ ಎನ್ನಲಾಗಿದೆ. ತರಗತಿಯಲ್ಲಿ ಪಾಠ ಮಾಡುವಾಗ, ಪ್ರಾರ್ಥನಾ ಸಂದರ್ಭದಲ್ಲಿ ಶಿಕ್ಷಕ ವಿದ್ಯಾರ್ಥಿನಿಗೆ ಮೊಬೈಲ್ ರಾಣಿ ಮೊಬೈಲ್ ಹ್ಯಾಕರ್, ಕಿರಿಕ್ ಪಾರ್ಟಿ ಹೀಗೆ ಹೀಯಾಳಿಸಿ ವಿದ್ಯಾರ್ಥಿನಿಗೆ ದಿನ ನಿತ್ಯವೂ ಕಿರುಕುಳ(Harassment)ನೀಡುತ್ತಾ ಬಂದಿರುವ ಬಗ್ಗೆ ವಿದ್ಯಾರ್ಥಿನಿಯ ತಂದೆ ಶಿಕ್ಷಣಾಧಿಕಾರಿಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.
ಮುಖ್ಯ ಶಿಕ್ಷಕನಿಂದ ಕಿರುಕುಳಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ಕಳೆದ ಕೆಲವು ದಿನಗಳಿಂದ ಶಾಲೆಗೆ ಬಾರದೆ ಮನೆಯಲ್ಲಿಯೆ ಉಳಿದುಕೊಂಡಿದ್ದು, ಆ ಶಿಕ್ಷಕ ಇರೋ ತನಕ ತಾನು ಯಾವ ಕಾರಣಕ್ಕೂ ಶಾಲೆಗೆ (School)ಹೋಗುವುದಿಲ್ಲ ಎಂದು ಮನೆಯಲ್ಲಿಯೆ ಉಳಿದುಕೊಂಡಿದ್ದಾಳೆ, ಇನ್ನೂ ಅದೆ ತರಗತಿಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಂದು ಶಿಕ್ಷಣಾಧಿಕಾರಿಗಳ ಕಚೇರಿಯ ಎದುರು ಕೆಲ ಗಂಟೆಗಳ ಕುಳಿತು ಪ್ರತಿಭಟನೆ ಕೈಗೊಂಡು,ತಕ್ಷಣದಲ್ಲಿ ಶಿಕ್ಷಕ ವಿನಾಯಕ ಅವಧಾನಿ ವಿರುದ್ದ ಕ್ರಮ ಜರುಗಿಸಬೇಕು. ಇಲ್ಲದೆ ಹೋದರೆ ತಾವು ಸಹ ಮುಂದಿನ ದಿನದಲ್ಲಿ ತರಗತಿಗೆ ಹಾಜರಾಗದೆ ದೂರ ಇರಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ವಿದ್ಯಾರ್ಥಿನಿಯರಿಂದ ಮನವಿ ಸ್ವೀಕರಿಸಿರುವ ಶಿಕ್ಷಣಾಧಿಕಾರಿಗಳು ಶಿಕ್ಷಕನ ವಿರುದ್ದ ಬಂದಿರುವ ದೂರನ್ನ ಮೇಲಾಧಿಕಾರಿಗಳಿಗೆ ರವಾನಿಸಿದ್ದಾರೆ.ಈ ಶಿಕ್ಷಕ ಇದೇ ರೀತಿ ಅನೇಕ ವಿದ್ಯಾರ್ಥಿನಿಯರಿಗೆ ಕಿರುರುಳ ನೀಡುತ್ತಿದ್ದ ಎನ್ನುವ ಬಗ್ಗೆ ಈ ಘಟನೆ ನಂತರದಲ್ಲಿ ಕೇಳಿಬರಲಾರಂಭಿಸಿದೆ.