Suddibindu.in
Siddapur: ಸಿದ್ದಾಪುರ : ಮಂಗನಕಾಯಿಲೆಗೆ ಮಹಿಳೆ ಓರ್ವಳು ಮೃತಪಟ್ಟಿರುವ(death of a woman)ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಿಡ್ಡಿ ಗ್ರಾಮದಲ್ಲಿ(Jiddi village)ನಡೆದಿದೆ..
ಇದನ್ನೂ ಓದಿ:-ಆ ಶಿಕ್ಷಕ ಶಾಲೆಯಲ್ಲಿ ಇರೋ ತನಕ’ ನಾನು ಶಾಲೆಗೆ ಹೋಗಲ್ಲ. ವಿದ್ಯಾರ್ಥಿನಿ ಕಣ್ಣೀರು.
ಮಂಗನಕಾಯಿಲೆಗೆ ಜಿಡ್ಡಿ ಗ್ರಾಮದ 65 ವರ್ಷದ ಮಹಿಳೆ ಮೃತಪಟ್ಟಿದ್ದಾಳೆ. ಮಹಿಳೆಗೆ ಕೆಲ ದಿನಗಳ ಹಿಂದೆ ಮಂಗನಕಾಯಿಲೆ ಕಾಣಿಸಿಕೊಂಡಿತ್ತು. ಬಳಿಕ ಆಕೆಯನ್ನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು,ಚೇತರಿಕೆ ಕಾಣಿಸಿಕೊಂಡ ಕಾರಣ ಮನೆಗೆ ಕರೆತರಲಾಯಿತು. ಬಳಿಕ ಮತ್ತೆ ಸಮಸ್ಯೆ ಕಾಣುತ್ತಿದ್ದಂತೇ ಸಾಗರದ ಆದರ್ಶ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ನಂತರದಲ್ಲಿ ಸಹ ಆದರ್ಶ ಹಾಸ್ಪಿಟಲ್ ನಿಂದ ಕೂಡ ಮನೆಗೆ ವಾಪಸ್ ಕರೆದುಕೊಂಡು ಬರಲಾಗಿತ್ತು.
ನಿನ್ನೆ ಏಕಾಏಕಿ ಸಮಸ್ಯೆ ಕಾಯಿಲೆ ಉಲ್ಭಣಗೊಂಡು ಮಹಿಳೆ ಮೃತಪಟ್ಟಿದ್ದಾಳೆ. ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಾತ್ರ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮಂಗನಕಾಯಿಲೆಗೆ ಸಿದ್ದಾಪುರ ಹಾಟ್ ಸ್ಪಾಟ್ ಆಗುತ್ತಿದ್ದು ಸಿದ್ದಾಪುರ, ಜನತೆಯಲ್ಲಿ ಆತಂಕ ಸೃಷ್ಠಿಮಾಡಿದೆ. ಇದುವರಗೆ ಸಿದ್ದಾಪುರದಲ್ಲಿ 43 ಮಂದಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದೆ.ಕಾಯಿಲೆ ಹೆಚ್ಚಾಗುತ್ತಿದ್ದರೂ ಸಹ ಸರಿಯಾದ ಲಸಿಕೆ ಸಿಗದೆ ಜನ ಕಂಗಾಲಾಗುವಂತಾಗಿದೆ.