ಕಾರವಾರ : ಇದುವರೆಗೆ ಶಾಸಕಿ ವಿರುದ್ಧ ಮಾಡಿರುವ ಎಲ್ಲಾ ಆರೋಪಕ್ಕೆ ನಾನು ಸದಾ ಬದ್ದವಾಗಿದ್ದೇನೆ ನಾನು ಮಾಡಿದ ಸತ್ಯವಾದದ್ದು ಎಂದು ಗುತ್ತಿಗೆದಾರರ ಸಂಘದ ಮಾಧವ ನಾಯ್ಕ ಗಣಪತಿ ದೇವರ ವಿಗ್ರಹದ ಮೇಲೆ ಪ್ರಮಾಣ ಮಾಡಿದ್ದಾರೆ.

ಅಂಕೋಲಾ ಶಾಸಕಿ ವಿರುದ್ಧ ಮಾಧವ ನಾಯ್ಕ 40% ಕಮೀಷನ್ ಆರೋಪ ಮಾಡುತ್ತಾ ಬಂದಿದ್ದು,ನಾನು ಮಾಡಿದ ಆರೋಪ ಸತ್ಯವಾಗಿದೆ. ನಾನು ಆಧಾರ ಇಲ್ಲದೆ ಯಾವುದೇ ಆರೋಪ ಮಾಡಿಲ್ಲ.ನನಗೆ ಶಾಸಕರ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ.

ಕ್ಷೇತ್ರದಲ್ಲಿ ಭಾರೀ ಅನ್ಯಾಯವಾಗುತ್ತಿದೆ. ನಾನು ಈವರೆಗೆ ಶಾಸಕಿ ಮೇಲೆ ಮಾಡಿದ ಆರೋಪ ಸತ್ಯವಾಗಿದ್ದು, ಗಣೇಶನ ವಿಗ್ರಹದ ಮೇಲೆ ಪ್ರಮಾಣ ಮಾಡುತ್ತನೆ ಇದು ಸತ್ಯ,ಶಾಸಕಿ ಯಾವುದೇ ಕಮಿಷನ್ ಪಡೆದಿಲ್ಲ ಅಂದ್ರೆ, ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ. ಎಂದು ಮಾಧವ ನಾಯ್ಕ ಶಾಸಕಿಗೆ ದೇವರ  ಸವಾಲ್ ಹಾಕಿದ್ದಾರೆ‌. ಕಾರವಾರ – ಅಂಕೋಲ ಕ್ಷೇತ್ರದಲ್ಲಿ ಸರ್ಕಾರ ಪ್ಯಾಕೇಜ್ ಕಾಮಗಾರಿಗಳಲ್ಲಿ 40% ಕಮೀಷನ್ ನಡೆಯುತ್ತಿದೆ. ಇದನ್ನ ವಿರೋಧಿಸಿ ಹೋರಾಟ ಮಾಡಿದ್ದೆ.

ನನ್ನ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಕೋಟ್೯ನಲ್ಲಿ 5 ಕೋಟಿ ಮಾನನಷ್ಟ ಮುಕದ್ದಮೆ ಹೂಡಿದ್ದಾರೆ.ಕ್ಷೇತ್ರದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾ ಶಾಸಕಿ ತಿರಗಾಡುತ್ತಿದ್ದಾಳೆ. ನಾನು ಮಾಡಿದ ಆರೋಪದ ಬಗ್ಗೆ ಕೋಟ್೯ನಲ್ಲಿ ಸಾಕ್ಷಿಗಳನ್ನ ನೀಡುತ್ತೆನೆ ಎಂದಿದ್ದಾರೆ.