ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ದಾಖಲೆಯ 40.02 ಉಷ್ಣಾಂಶ ದಾಖಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಗರಿಷ್ಠ 36ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಆದರೆ ಇದೆ ಮೊದಲ ಭಾರಿಗೆ ಕರಾವಳಿ ತಾಲೂಕಿನಲ್ಲಿ ದಾಖಲೆಯ ಉಷ್ಣಾಂಶ ಉಂಟಾಗಿದೆ. ನಿನ್ನೆ ಶನಿವಾರ ಒಂದೆ ದಿನ ದಾಖಲೆಯ ಉಷ್ಣಾಂಶ ಉಂಟಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಉಷ್ಣಾಂಶ ಏರಿಕೆ ಆಗುತ್ತಿದೆ. ಪ್ರತಿನಿತ್ಯ ಒಂದು ಡಿಗ್ರಿ ಸೆಲ್ಷಿಯಸ್ ಏರಿಕೆ ಆಗುತ್ತಿದೆ. ಮಾರ್ಚ 01ಕ್ಕೆ 37 ಡಿಗ್ರಿ ದಾಖಲಾಗಿದ್ದರೆ, ಮಾ. 03ಕ್ಕೆ 38.01 ಮತ್ತು ಮಾ. 04 ನಿನ್ನೆ ಒಂದೆ ದಿನ ಗರಿಷ್ಠ 40.02 ಡಿಗ್ರಿ ದಾಖಲಾಗಿದ್ದು, ತಾಪಮಾನ ಏರಿಕೆಯಿಂದ ಜನರು ತತ್ತರಿಸುವಂತಾಗಿದ್ದು,
ಇಷ್ಟೊಂದು ಉಷ್ಣಾಂಶ ಹೇಗೆ.?
ಸದ್ಯ ಉತ್ತರ ಭಾರದಲ್ಲಿ ತಾಪಮಾನದಲ್ಲಿ ಭಾರಿ ಏರೆ ಆಗಿದ್ದು,ಪುಣೆ,ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.ಇದರ ಪರಿಣಾಮವಾಗಿ ದಕ್ಷಿಣದ ರಾಜ್ಯದಗಳ ಮೇಲೆ ಪರಿಣಾಮ ಬಿಳುತ್ತಿದೆ.
ಉತ್ತರ ಭಾರತದಿಂದ ಕರಾವಳಿ ಜಿಲ್ಲೆಯ ಕಡೆಗೆ ಗಾಳಿ ಬಿಸುತ್ತಿದ್ದು,ಇದು ಬಿಸಿಗಾಳಿಯಾಗಿದೆ.ಈ ಕಾರಣಕ್ಕಾಗಿ ಬಿಸಿ ಗಾಳಿ ಬಿಸುವ ಬಗ್ಗೆ ಭಾರತೀಯ ಹವಮಾನ ಇಲಾಖೆ ಬಿಸಿ ಗಾಳಿ ಬಿಸುವ ಬಗ್ಗೆ ಇದೆ ಮೊದಲ ಭಾರಿಗೆ ಎಚ್ಚರಿಕೆ ನೀಡಿದೆ.
ಮುಂದಿನ ದಿನಗಳಲ್ಲಿ ರಣ ಬಿಸಿಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಸಿಗೆಯಲ್ಲಿ ಮತ್ತಷ್ಡು ತಾಪಮಾನ ಹೆಚ್ಚಾಗಲಿದ್ದು, ನೀರಿನ ಸಮಸ್ಯೆ ಉಂಟಾಗಲಿದೆ. ಬಿಸಿ ಗಾಳಿಯ ಜೊತೆಗೆ ದೂಳು ವಿಶ್ರಣಗೊಂಡು ಕೆಮ್ಮು ಹೆಚ್ಚಾಗುವ ಸಾಧ್ಯತೆ ಇದೆ.