ಹೊನ್ನಾವರ : ಚಾಲಕನ ನಿಯಂತ್ರಣ ತಪ್ಪಿ ಕಾರ ಪಲ್ಟಿಯಾಗಿ ಚಾಲಕ ಹಾಗೂ ಕಾರನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಂದಾವರ ಟೇಬ್ರಿ ಹಳ್ಳದ ತಿರುವಿನಲ್ಲಿ ನಡೆದಿದೆ.

ಧಾರೇಶ್ವರದಿಂದ ಚಂದಾವರ ಮಾರ್ಗವಾಗಿ ಸಾಗರಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರ ಚಾಲಕ ತನ್ನ ಕಾರನ್ನ ಅತೀವೇಗವಾಗಿ ಕಾರ ಚಲಿಸಿಕೊಂಡಿ ಹೋಗುತ್ತಿದ್ದು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಹಳ್ಳಕ್ಕೆ ಬಿದ್ದಿದೆ.

ಕಾರ ಪಲ್ಟಿಯಾಗಿರುವುದರಿಂದ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರ ಸಂಪೂರ್ಣ ಜಖಂಗೊಂಡಿದೆ. ಇನ್ನೂ ಅಪಘಾತವಾಗಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.