ಸುದ್ದಿಬಿಂದು ಬ್ಯೂರೋ
ಅಂಕೋಲಾ : ನೀರಿನಲ್ಲಿ ಮುಳುಗಡೆಯಾಗುತ್ತಿ ತಮಿಳನಾಡು(Tamil Nadu)ಮೂಲದ ಓರ್ವ ಪ್ರವಾಸಿಗನ(tourist)ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ(Utarakannda)ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಫಾಲ್ಸ್ ನಲ್ಲಿ (Vibhuti Falls) ನಡೆದಿದೆ.
ತಮಿಳುನಾಡು ಮೂಲದ ಮೊಹಮ್ಮದ್ ತಾಜುದ್ದೀನ್(19) ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದಾನೆ. ಜಲಪಾತದಲ್ಲಿ ಈಜಲು ನೀರಿಗೆ ಇಳಿದಾಗ ಈತ ಮುಳುಗಡೆಯಾಗುತ್ತಿರುವುದನ್ನ ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ವಿಜಯ ನಾಯ್ಕ ಪ್ರವಾಸಿಗನ ರಕ್ಷಣೆ ಮಾಡಿದ್ದಾರೆ.
65 ವಿದ್ಯಾರ್ಥಿಗಳ ತಂಡ ವಿಭೂತಿ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದರು.ದಾಂಡೇಲಿ ಪ್ರವಾಸ ಮುಗಿಸಿ ವಿಭೂತಿ ಫಾಲ್ಸ್‌ಗೆ ಬಂದಿದ್ದರು. ಜಲಪಾತಕ್ಕೆ ಬಂದಿರುವ ವೇಳೆ ಲೈಪ್ ಗಾರ್ಡ್ ಸಿಬ್ಬಂದಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರು.