ಹುಬ್ಬಳ್ಳಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕರೆದುಕೊಂಡು ಹೋಗಿ ಪೊಲೀಸರೆ ಹೊಡೆದು ಸಾಯಿಸಿದ್ದಾರೆ ಎಂದು ಸಾವಿಗೀಡಾದವನ ಕುಟುಂಬಸ್ಥರು ಆರೋಪಿಸಿದ್ದಾರೆ.

ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಗೋವಿಂದ ಪೂಜಾರ ಎಂಬಾತನ ಲಾಕಪ್‌ಡೆತ್ ನಡೆದಿದೆ ಎಂದು ಕುಟುಂಬದ ಗೀತಾ ಪೂಜಾರ ದೂರಿದ್ದಾರೆ.ಕಳ್ಳತನ ಮಾಡಿದ್ದಾರೆಂದು ಅಣ್ಣ ಗೋವಿಂದನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು‌. ಠಾಣೆಗೆ ಕರೆದೊಯ್ದು ಮನಬಂದಂತೆ ಹೊಡೆದಿದ್ದಾರೆ. ಪೊಲೀಸರ ಏಟಿಗೆ ಗೋವಿಂದ ಠಾಣೆಯಲ್ಲಿ ಮೃತಪಟ್ಟಿದ್ದಾನೆ.

ಪೀಡ್ಸ್ ಬಂದಿದೆ ಅಂತಾ ಹೇಳಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗೋವಿಂದನ ಸಾವಿಗೆ ಪೊಲೀಸರೇ ಕಾರಣ. ಹಾವೇರಿ ಪೊಲೀಸರು ಸರಿಯಾಗಿ ಸ್ಪಂಧಿಸುತ್ತಿಲ್ಲ. ನಮ್ಮ ಅಣ್ಣನ ಸಾವಿಗೆ ನ್ಯಾಯ ಬೇಕು. ನ್ಯಾಯಕ್ಕಾಗಿ ಐಜಿಯವರಿಗೆ ದೂರು ಕೊಡುತ್ತೇವೆ ಎಂದಿದ್ದಾರೆ..