ಸುದ್ದಿಬಿಂದು ಬ್ಯೂರೋ
ಕುಮಟ :ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ಖಂಡಗಾರ ರಸ್ತೆಯ ಮುಗ್ವೆಖಾನ್ ಬಳಿಯ ರೈಲ್ವೆ ಗೇಟ್ ಸಮೀಪದಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ.
ಸಂದೇಶ ಅಂಬಿಗ ಮಿರ್ಜಾನ (35) ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತ ಯುವಕ ನಿಕ್ಕರ್ ಹಾಗೂ ಬನಿಯನ್ ಮೇಲಿದ್ದಾನೆ.ಇನ್ನೂ ಆತನ ಕೈ ಮೇಲೆ ಓಂ ಎಂದು ಬರೆದುಕೊಂಡಿದ್ದಾನೆ. ಕುಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸ್ಥಳಕ್ಕ ಕುಮಟ ಪೊಲೀಸರು ಭೇಟಿ ನೀಡಿದ್ದು,ಮೃತ ಶವವನ್ನ ಕುಮಟ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.