ಸುದ್ದಿಬಿಂದು ಬ್ಯೂರೋ
ಕುಮಟಾ: ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಸೆಕೆಂಡರಿ ಹೈಸ್ಕೂಲ್ ವಿದ್ಯಾರ್ಥಿಗಳಾದ ರೋಹಿತ್ ಸಿಣ್ಣ ಅಂಬಿಗ ಯೋಗ ಸ್ಪರ್ಧೆಯಲ್ಲಿ ಪ್ರಥಮ, ಸಿಂಚನಾ ಗೌಡ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ,TGT ವಿಭಾಗದಲ್ಲಿ ಶಿವಾನಿ ಗೌಡ ಗುಂಡು ಎಸೆತದಲ್ಲಿ ಪ್ರಥಮಸ್ಥಾನ ಪಡೆದು ಜಿಲ್ಲಾ ಮಟ್ಟಕೆ ಆಯ್ಕೆಯಾಗಿದ್ದಾರೆ. ಅನುಷಾ ಹರಿಕಂತ್ರ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಾದ ನಾಗರಾಜ ಜಿ ನಾಯಕ ಇವರಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರರಾದ ಹೊನ್ನಪ್ಪ ಎನ್ ನಾಯಕ ಹಾಗೂ ಸದಸ್ಯರು ಹಾಗೂ ಶಾಲೆಯ ಮುಖ್ಯಾಧ್ಯಾಪಕರಾದ ರೋಹಿದಾಸ್ ಗಾಂವಕರ ಹಾಗೂ ಶಿಕ್ಷಕವೃಂದ ಶುಭ ಹಾರೈಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.
ಗಮನಿಸಿ