ಸುದ್ದಿಬಿಂದು ಬ್ಯೂರೋ
ಬೆಂಗಳೂರು: ಗೋವಿಂದ ಪೂಜಾರಿ ಎಂಬುವವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5ಕೋಟಿ ಪಂಗನಾಮ ಹಾಕಿ ವಂಚನೆ ಕೇಸ್ ನಲ್ಲಿ ಜೈಲು ಪಾಲಾಗಿರುವ ಚೈತ್ರಾ ಕುಂದಾಪುರ ವಿಚಾರಣೆ ವೇಳೆ ಅಸ್ವಸ್ಥತರಾಗಿ ನೆಲಕ್ಕೆ ಬಿದ್ದಿರುವ ಘಟನೆ ನಡೆದಿದೆ.

ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪದ ಅಡಿಯಲ್ಲಿ ಚೈತ್ರಾ ಚೈತ್ರಾ ಕುಂದಾಪುರ ರನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆ ನಡೆಸಲಾಗಿದೆ.10 ದಿನಗಳ ಕಾಲ ಕಷ್ಟಡಿಗೆ ಪಡೆದಿರುವ ಅಧಿಕಾರಿಗಳು ವಂಚನೆ ಹಿಂದೆ ಯಾರೆಲ್ಲಾ ಇದ್ದಾರೆ.ಇನ್ನೂ ಎಲ್ಲೆಲ್ಲಿ ರೀತಿಯ ಕೆಲಸ ಮಾಡಿದ್ದಾರೆ. ಎನ್ನುವ ಕುರಿತಾಗಿ ಮಾಹಿತಿ ಪಡೆಯುತ್ತಿದ್ದಾರೆ. ಇನ್ನೂ ಅಧಿಕಾರಿಗಳ ವಿಚಾರಣೆ ವೇಳೆ ಚೈತ್ರಾ ಕುಂದಾಪುರ ಏಕಾಏಕಿ ಸಿಸಿಬಿ ಕಚೇರಿಯಲ್ಲಿ ಕುಸಿದು ಬಿದ್ದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ನಿನ್ನೆ ಮಹಿಳಾ ಸಾಂತ್ವನ ಕೇಂದ್ರದಿಂದ ವಿಚಾರಣೆಗೆಂದು ಸಿಸಿಬಿ ಕಚೇರಿಗೆ ಕರೆದುಕೊಂಡು ಬಂದ ವೇಳೆ ರಾಜಾರೋಷವಾಗಿ ಗಾಡಿಯಿಂದ ಇಳಿದು ಈ ಕೇಸ್ ಹಿಂದೆ ದೊಡ್ಡ ದೊಡ್ಡವರ ಹೆಸರು ಇದೆ. ಸ್ವಾಮೀಜಿ ಅಂದರ್ ಆಗ್ಲಿ. ಎಲ್ಲಾ ಹೊರ ಬರುತ್ತೆ ಎಂದು ಗುಟುರು ಹಾಕಿದ್ದ ಚೈತ್ರಾ, ಇಂದು ಸಿಸಿಬಿ ಕಛೇರಿಗೆ ವಿಚಾರಣೆಗೆ ಬರುವ ವೇಳೆ ಫುಲ್ ಸೈಲೆಂಟ್ ಆಗಿ ಬಂದಿದ್ದಾರೆ. ಮೂರನೇ ದಿನದ ವಿಚಾರಣೆ ಮುಂದುವರೆಸಲು ಮುಂದಾದಾಗ ಏಕಾಏಕಿ ಚೈತ್ರಾ ಕುಂದಾಪುರ ಕುಸಿದು ಬಿದಿದ್ದಾರೆ.

ಇನ್ನು ವೈದ್ಯರ ಪ್ರಾಥಮಿಕ ತನಿಖೆಯಲ್ಲಿ ಚೈತ್ರಾ ಕುಂದಾಪುರ ಅವರು ಮೂರ್ಛೆ ರೋಗದಿಂದ ಬಳಲುತ್ತಿದ್ದರು.ಎಂದು ತಿಳಿದು ಬಂದಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಐಸಿಯು ನಲ್ಲಿ ಚೈತ್ರಾ ಕುಂದಾಪುರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ