ಸುದ್ದಿಬಿಂದು ಬ್ಯೂರೋ
ಸಾಗರ : ತುಳಸಿ ಹಬ್ಬಕ್ಕಾಗಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ(Sagar) ಉತ್ತರಕನ್ನಡ(Utarakannda) ಜಿಲ್ಲೆಯ ಹೊನ್ನಾವರ ಕಡೆ ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಸಾಗರ ಸಮೀಪ ನಡೆದಿದೆ.

ಸಾಗರದಿಂದ ಕಬ್ಬು (sugar cane) ತುಂಬಿಕೊಂಡು ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ. ಇದರಿಂದಾಗಿ ಲಾರಿಯಲ್ಲಿ ಕಬ್ಬಿನ ರಾಶಿಯ ಮೇಲೆ ಕುಳಿತ್ತಿದ್ದ ನಾಲ್ವರು ಕಬ್ಬಿನ ರಾಶಿಯ ಒಳಗೆ ಸಿಲುಕಿಕೊಂಡಿದ್ದರು. ನಂತರದ ಜೆಸಿಬಿ(JCB) ಮೂಲಕ‌ ಕಬ್ಬಿನ ರಾಶಿಯನ್ನ ತೆರವು ಮಾಡಿ ಸಿಲುಕಿಕೊಂಡಿದ್ದವರನ್ನ ರಕ್ಷಣೆ ಮಾಡಲಾಗಿದೆ.

ಕಬ್ಬಿನ ರಾಶಿಯಲ್ಲಿ ಸಿಲುಕಿಕೊಂಡವರಿಗೆ ಗಾಯವಾಗಿದ್ದು ಎಲ್ಲರನ್ನ ಸಾಗರ ಸರಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ‌ನೀಡಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.