suddibindu.in
ದಾಂಡೇಲಿ : ನಗರದ ಟೌನ್ ಶಿಪ್ ನ ಶ್ರೀ ರಾಘವೇಂದ್ರ ಮಠದ ಹತ್ತಿರದಲ್ಲಿರುವ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ‌ಅವರ ಮನೆಯ ಎದುರಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ಕಂಬ ಒಂದು ಮುರಿದು ಬಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.

ನಗರದ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಉಸ್ಮಾನ್ ಹೈದರ್ ಶೇಖ ಎಂಬವರು ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೋದ ಒಂದೆರಡು ನಿಮಿಷದಲ್ಲೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ.‌ ಒಂದು ವೇಳೆ ಸಂಜೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದೆ ಸ್ಥಳದಲ್ಲಿ‌ ನಿತ್ಯವೂ ಆಟವಾಡುತ್ತಿದ್ದರು. ಆ ವೇಳೆ ಏನಾದ್ರೂ ಈ ವಿದ್ಯುತ್ ಕಂಬ ಬಿದ್ದಿದ್ದರೆ ಭಾರೀ ದೊಡ್ಡ ಅನಾಹುತವೆ ಉಂಟಾಗುತ್ತಿತ್ತು.

ಇದನ್ನೂ ಓದಿ

ಅದೃಷ್ಟವಶಾತ್ ಈ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಯಾರು ಇಲ್ಲದಿರುವ ಕಾರಣ ಆಗಬಹುದಾದ ಅನಾಹುತ ಒಂದು ತಪ್ಪಿದಂತಾಗಿದೆ.