suddibindu.in
Karwar:ಕಾರವಾರ: ಉತ್ತರ ಕನ್ನಡ(uttara Kannada) ಜಿಲ್ಲೆಯ ಕುಮಟಾ (kumta) ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್(china boat)ಒಂದು ಪತ್ತೆಯಾಗಿದ್ದು, ರಾಜ್ಯದ ಕರಾವಳಿಯ.(State coast,) ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಮೂಲದ ಬೋಟ್ ಪತ್ತೆಯಾಗಿದ್ದು, ಮಂಗಳೂರಿನ ಮೀನುಗಾರರು ಆ ಬೋಟ್‌ನ ಫೋಟೊ,ವಿಡಿಯೋ ಸೆರೆಹಿಡಿದಿದ್ದು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
.

ಇದನ್ನೂ ಓದಿ : ಶಿಕ್ಷಕನ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು

BVKVS ಹೆಸರಿನ ಬೋಟ್ ಇದಾಗಿದ್ದು, ಚೀನಾದ ಬಾವುಟವನ್ನು ಬೋಟ್‌ನಲ್ಲಿ ಹಾರಾಡುತ್ತಿದೆ.ಕುಮಟಾ‌‌ ಸಮೀಪ ಆಳ ಸಮುದ್ರದಲ್ಲಿ ಬೇರೊಂದು ಬೋಟನಲ್ಲಿ ಮೀನುಗಾರಿಕೆ ಮಾಡುತ್ತಿದ್ದ‌ ಮಂಗಳೂರಿನ ಮೀನುಗಾರರು ಚೀನಾ ಬೋಟ್ ಎಂಬ ಶಂಕೆಯಲ್ಲಿ ಫೋಟೋ ತೆಗೆದಿದ್ದಾರೆ. ಚೀನಾ ಬೋಟ್‌ ಕಾಣಿಸಿಕೊಂಡಿರುವ ಬಗ್ಗೆ, ಕೋಸ್ಟ್ ಗಾರ್ಡ್(Coast Guard) ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯ ಗಮನಕ್ಕೆ ತಂದಿದ್ದಾರೆ. ಮೀನುಗಾರರ ಮಾಹಿತಿ ಪ್ರಕಾರ, ಇದನ್ನು ಕುಮಟಾದಿಂದ ಅಂದಾಜು 200ಕಿಮೀ ದೂರದ ಆಳ ಸಮುದ್ರದಲ್ಲಿ ಸೆರೆಹಿಡಿಯಲಾಗಿದೆ. ಚೀನಾ ಬೋಟಿನವರು ರಾತ್ರಿ ವೇಳೆ ನಿಷೇಧಿತ ಲೈಟ್ ಫಿಶಿಂಗನ್ನೂ ನಡೆಸುತ್ತಿದ್ದರು ಎಂದವರು ತಿಳಿಸಿದ್ದಾರೆ.

ಬೋಟ್ ಬಗ್ಗೆ ಇಂಟೆಲಿಜೆನ್ಸ್ ಮೂಲಕ ಮಾಹಿತಿ ಪಡೆಯಾಗಿದ್ದು, ಆಳ‌ ಸಮುದ್ರದಲ್ಲಿ ಕಾಣಿಸಿಕೊಂಡಿರುವುದು ಚೀನಾದ್ದೇ ಬೋಟ್ ಎನ್ನುವುದು ಖಚಿತವಾಗಿದೆ ಎನ್ನಲಾಗಿದೆ. ಚೀನಾದ ಫುಝು ಎನ್ನುವ ಹೆಸರಿನ ಬಂದರಿನಲ್ಲಿ ಬೋಟ್‌ ರಿಜಿಸ್ಟರ್ ಆಗಿದೆ. ಇನ್ನೂ ಈ ಬೋಟ್ ನಲ್ಲಿ 20ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು ಇದ್ದಾರೆನ್ನಲಾಗಿದೆ. ಇನ್ನೂ ಬೋಟ್ ಹಾಕಿರುವುದು ಫ್ಲಾಗ್ ಸಹ ಚೀನಾದ್ದೇ ಎಂದು ಖಚಿತಪಡಿಸಲಾಗಿದೆ.

ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ ಇರುವುದರಿಂದ ಅದರ ಪರಿಸರದಲ್ಲಿಯೇ ಈ ಬೋಟ್ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಚೀನಾ ಈ ಬೋಟ್ ಮೂಲಕ ಗೂಢಚಾರಿಕೆ ನಡೆಸುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ. ಬೋಟ್ ಪತ್ತೆ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪಡೆ ಅಲರ್ಟ್ ಆಗಿದ್ದು, ಪತ್ತೆಕಾರ್ಯದಲ್ಲಿ ತೊಡಗಿದೆ.

ಚೀನಾ ಬೋಟ್ ಪತ್ತೆ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸ್‌ ಪಡೆ ಎಲರ್ಟ್ ಆಗಿದ್ದು, ತನಿಖೆ ಆರಂಭಿಸಿದ್ದಾರೆ. ಮೀನುಗಾರರಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕುಮಟಾದಿಂದ ತೆರಳಿದ್ದ ಬೋಟಿನಲ್ಲಿದ್ದ ಮಂಗಳೂರು ಮೂಲದ ಮೀನುಗಾರರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನುವ ಮಾಹಿತಿಯಿದೆ. ತನಿಖೆಗೆ ಹೊನ್ನಾವರ ಕರಾವಳಿ ಪೊಲೀಸ್ ಪಡೆ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು ನೇಮಿಸಲಾಗಿದೆ.