ಸುದ್ದಿಬಿಂದು ಬ್ಯೂರೋ
ಕಾರವಾರ : ಮಾಜಾಳಿಯ ಚೆಕ್ ಪೊಸ್ಟ್ ನಲ್ಲಿ ಸ್ಪಿರಿಟ್ ಟ್ಯಾಂಕರ್ (Spirit) ವಶಕ್ಕೆ ಪಡೆದಿರುವ ಪ್ರಕರಣದಲ್ಲ ಶಾಸಕರಾಗಿರುವ ಸತೀಶ ಸೈಲ್( MLA Satish Sail) ಅವರು ನಾವು ವಶಕ್ಕೆ ಪಡೆದಿರುವ ಸ್ಪಿರಿಟ್ ಟ್ಯಾಂಕರ್ ಬಿಡಿ ಅಂತಾ ನಮ್ಮಗೆ ಶಾಸಕರಿಂದ ಯಾವುದೇ ಪೋನ್ ಬಂದಿಲ್ಲ ವಶಕ್ಕೆ ಪಡೆದುಕೊಂಡಿರುವ ಟ್ಯಾಂಕರ್ ಚಾಲಕ, ಕ್ಲಿನರ್ ಅರನ್ಮ ವಶಕ್ಕೆ ಪಡೆದು ಮೂರು ದಿನವಾದರೂ ಯಾಕೆ ಪ್ರಕರಣ ದಾಖಲಿಸಿಕೊಳ್ಳದೆ ವಶದಲ್ಲಿ ಇಟ್ಟುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ ಹೊರತು ದೌರ್ಜನ್ಯ ಎಸೆಗಿಲ್ಲ ಎಂದು ಅಬಕಾರಿ ಡಿಸಿ( Excise DC,) ರೂಪಾ ಎಂ ಸ್ಪಷ್ಟ ಪಡಿಸಿದ್ದಾರೆ.
ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಪಿರಿಟ್ ತುಂಬಿದ ಟ್ಯಾಂಕರ್(Spirit Tanker,) ವಶಕ್ಕೆ ಪಡೆದಿರುವ ಪ್ರಕರಣಕ್ಕ ಸಂಬಂಧಿಸಿ ಕಾರವಾರ ಕ್ಷೇತ್ರದ ಮಾಜಿ ಶಾಸಕಿ( Former MLA,) ರೂಪಾಲಿ ನಾಯ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಮೂರು ದಿನಗಳ ಹಿಂದೆ ಸ್ಪಿರಿಟ್ ತುಂಬಿದ ಟ್ಯಾಂಕರ್ ವಶಕ್ಕೆ ಪಡೆದುಕೊಂಡಿದ್ದರು, ಆ ಟ್ಯಾಂಕರ್ ಹಾಗೂ ಚಾಲಕ ಕ್ಲಿನರ್ ಅವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳದಂತೆ ಚೆಕ್ ಪೊಸ್ಟ್ ಗೆ ತೆರಳಿ ಗೂಂಡಾಗಿರಿ ಮಾಡಿದ್ದಾರೆಂದು ಹಾಲಿ ಶಾಸಕರಾಗಿರುವ ಸತೀಶ್ ಸೈಲ್ ವಿರುದ್ಧ ಮಾಜಿ ಶಾಸಕರಾಗಿರುವ ರೂಪಾಲಿ ನಾಯ್ಕ ಅವರು ಗಂಭೀರ ಆರೋಪ ಮಾಡಿದ್ದರು.
ಶಾಸಕ ಸತೀಶ ಸೈಲ್ ರವರು ಸ್ಪಿರಿಟ್ ಸಾಗಾಟದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಲ್ಲದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆಗ್ರಹಿಸಿದ್ದರು . ಟ್ಯಾಂಕರ್ ಲಾರಿಯಲ್ಲಿ ಸ್ಪಿರಿಟ್ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ತಿಳಿದ ಅಬಕಾರಿ ಅಧಿಕಾರಿಗಳು ಲಾರಿಯನ್ನು ತಡೆಹಿಡಿದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾಗ ಶಾಸಕ ಸತೀಶ ಸೈಲ್ ಮಾಜಾಳಿ ಚೆಕ್ ಪೊಸ್ಟ್ ಗೆ ತೆರಳಿ ಸ್ಪಿರಿಟ್ ಟ್ಯಾಂಕರ್ ಬಿಡುವಂತೆ ಅಬಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾಗಿ ಅಬಕಾರಿ ಡಿಸಿ ಸ್ಪಷ್ಟನೆ ನೀಡುವ ಮೂಲಕ ಮಾಜಿ ಶಾಸಕಿ ಮಾಡಿರುವ ಆರೋಪವನ್ನ ತಳ್ಳಿ ಹಾಕಿದ್ದಾರೆ.