suddibindu.in
ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಶುಕ್ರವಾರ
ತಿಥಿ : ಚತುರ್ದಶಿ ತಿಥಿಯು ಹಗಲು 03.01 ರವರೆಗು ಇದ್ದು ಆನಂತರ ಹುಣ್ಣಿಮೆ ಆರಂಭವಾಗುತ್ತದೆ.
ನಕ್ಷತ್ರ : ಆಶೇಷ ನಕ್ಷತ್ರವು ರಾ.07.06 ವರೆಗು ಇರುತ್ತದೆ. ಆನಂತರ ಮಖ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.39
ಸೂರ್ಯಾಸ್ತ: ಸ.06.26
ರಾಹುಕಾಲ : ಬೆ.10.30 ರಿಂದ ಮ. 12.00

ಈ ದಿನದ ಅದೃಷ್ಟದ ಸಂಖ್ಯೆ 8-4-0-1

ಮೇಷ ರಾಶಿ : ಆರೋಗ್ಯದಲ್ಲಿ ಏರಿಳಿತವಿರುತ್ತದೆ. ಮನದಲ್ಲಿ ಧನಾತ್ಮಕ ಚಿಂತನೆಗಳು ಇರುತ್ತವೆ. ಮಾಡುವ ಕಾರ್ಯದಲ್ಲಿ ಶ್ರದ್ಧೆ ತೋರುವಿರಿ. ಸಮಾಜದಲ್ಲಿ ಗೌರವದ ಸ್ಥಾನ ಲಭ್ಯವಾಗುತ್ತದೆ. ವಾದ ವಿವಾದಗಳಿಂದ ದೂರ ಉಳಿಯುವಿರಿ. ಶಾಂತಿಯಿಂದ ಕೆಲಸ ಸಾಧಿಸುವಿರಿ. ಬಂದಷ್ಠೇ ಬೇಗ ಕೋಪ ಶಮನವಾಗುತ್ತದೆ. ಕುಟುಂಬದ ಉನ್ನತಿಗಾಗಿ ಶ್ರಮಿಸುವಿರಿ. ಆಮದು ರಫ್ತಿನ ವ್ಯವಹಾರದಲ್ಲಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ:-ಕುಮಟಾದ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆ

ವೃಷಭ ರಾಶಿ : ಆಕಸ್ಮಿಕವಾಗಿ ವಾದ ವಿವಾದದಲ್ಲಿ ಸಿಲುಕುವಿರಿ. ಸೋದರನ ಜೊತೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ದುಡುಕಿ ತೆಗೆದುಕೊಳ್ಳುವ ತೀರ್ಮಾನದಿಂದ ತೊಂದರೆ ಇರುತ್ತದೆ. ಉದ್ಯೋಗದಲ್ಲಿನ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿದೆ. ಅನಾವಶ್ಯಕ ಸುತ್ತಾಟದಿಂದ ದೈಹಿಕವಾಗಿ ಬಳಲುವಿರಿ. ಹಿರಿಯರ ವ್ಯಾಪಾರದಲ್ಲಿ ಸಹಾಯ ಮಾಡುವಿರಿ. ಏಕಾಂಗಿತನ ಬಹುವಾಗಿ ಕಾಡುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಗಮನ ನೀಡಲಿದ್ದಾರೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಸ್ವಂತ ಮನೆಯನ್ನು ಕಟ್ಟುವ ವಿಚಾರಕ್ಕೆ ಚಾಲನೆ ನೀಡುವಿರಿ.

ಮಿಥುನ ರಾಶಿ : ಅತಿಯಾದ ನಿರೀಕ್ಷೆಗಳು ಮಾನಸಿಕ ಒತ್ತಡ ಉಂಟುಮಾಡಲಿವೆ. ಉದ್ಯೋಗದಲ್ಲಿನ ಆಶೋತ್ತರಗಳು ನೆಮ್ಮದಿಯನ್ನು ಕದಡುತ್ತದೆ. ಉತ್ತಮ ಆದಾಯವಿರುತ್ತದೆ. ಹಣವನ್ನು ಉಳಿಸಲು ಪ್ರಯತ್ನಿಸುವಿರಿ. ಪಾಲುಗಾರಿಕೆಯಲ್ಲಿ ಹಣಕಾಸಿನ ವ್ಯವಹಾರವನ್ನುಅರಂಭಿಸುವಿರಿ. ಏಕಾಗ್ರತೆಯನ್ನು ಬೆಳೆಸಿಕೊಂಡಲ್ಲಿ ವಿದ್ಯಾರ್ಥಿಗಳು ಸಫಲತೆ ಕಾಣಬಹುದು. ಆಕಸ್ಮಿಕವಾಗಿ ಸ್ಥಿರಾಸ್ಥಿಯೊಂದು ನಿಮ್ಮ ಕೈ ಸೇರುತ್ತದೆ. ನೂತನ ವಾಹನ ಲಾಭವಿದೆ.

ಕರ್ಕ ರಾಶಿ : ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಮನೆಯ ನವೀಕರಣಕ್ಕಾಗಿ ಹಣವನ್ನು ಖರ್ಚುಮಾಡುವಿರಿ. ಬೇರೆಯವರಿಂದ ಹಣವನ್ನು ಎರವಲು ಪಡೆಯಬೇಕಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ನಿಮಗೆ ವಿವಾಹದ ಯೋಗವಿದೆ. ಸರಕಾರದ ಅನುದಾನದಲ್ಲಿ ವ್ಯಾಪಾರವನ್ನು ಅಭಿವೃದ್ಧಿಪಡಿಸುವಿರಿ. ನೀರಿರುವ ಪ್ರದೇಶಕ್ಕೆ ಕಿರುಪ್ರವಾಸ ಕೈಗೊಳ್ಳುವಿರಿ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಸಿಂಹ ರಾಶಿ : ಯಾಂತ್ರಿಕ ಬದುಕಿನಿಂದ ಬೇಸರ ಇರುತ್ತದೆ. ಉದ್ಯೋಗದಲ್ಲಿ ತೋರುವ ತಲ್ಲೀನತೆ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಸಹೋದ್ಯೋಗಿಗಳ ನಡುವಿರಿ. ಅಸಹಕಾರ ಮನೋಭಾವನೆ ದೂರವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ನೇರವಾದ ನಡೆನುಡಿ ಕೆಲವರ ಅಸಹನೆಗೆ ಕಾರಣವಾಗಲಿದೆ. ವಿದ್ಯಾರ್ಥಿಗಳು ದೃಢವಾದ ಮನಸ್ಸಿನಿಂದ ಕಲಿಕೆಯಲ್ಲಿ ಮುಂದುವರೆಯಬೇಕಾಗುತ್ತದೆ. ಸೇವಾ ಮನೋಭಾವನೆಯ ಕಾರಣ ಜನಪ್ರಿಯತೆ ಲಭಿಸುತ್ತದೆ.

ಕನ್ಯಾ ರಾಶಿ : ದಿನದ ಮುಖ್ಯವಾದ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುವಿರಿ. ಬಂಧು ಬಳಗದವರ ಕಷ್ಟ ನಷ್ಟಗಳಿಗೆ ಸ್ಪಂದಿಸುಉವಿರಿ. ವೈದ್ಯಕೀಯ ನೆರವಿನಿಂದ ಆರೋಗ್ಕದಲ್ಲಿನ ತೊಂದರೆ ಗುಣವಾಗುವುದು. ತಂದೆಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಕುಟುಂಬದಲ್ಲಿನ ನಿಮ್ಮ ಜವಾಬ್ದಾರಿಯು ಹೆಚ್ಚುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಉದ್ಯೋಗ ಬದಲಿಸುವ ಸೂಚನೆಗಳಿವೆ. ಮನೆಯಲ್ಲಿ ಮಂಗಳಕಾರ್ಯವೊಂದು ನೆರವೇರುತ್ತದೆ. ಸ್ತ್ರೀಯರೊಂದಿಗೆ ವಾದ ವಿವಾದವನ್ನು ಮಾಡದೇ ಇರುವುದು ಒಳ್ಳೆಯದು.

ತುಲಾ ರಾಶಿ : ಉದ್ಯೋಗದಲ್ಲಿ ಎಲ್ಲರ ಸ್ನೇಹ ಪ್ರೀತಿ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸ್ನೇಹಿತರ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳು ನೆಮ್ಮದಿಯಿಂದ ತಮ್ಮ ಗುರಿ ತಲುಪುತ್ತಾರೆ. ಮಕ್ಕಳಿಗೆ ಉದ್ಯೋಗ ದೊರೆವ ಸೂಚನೆಗಳಿವೆ. ಕೆಲಸ ಕಾರ್ಯದ ನಡುವೆ ವಿಶ್ರಾಂತಿ ತೆಗೆದುಕೊಳ್ಳಿ. ಸಾರ್ವಜನಿಕ ಕೆಲಸಗಳಲ್ಲಿ ಆಸಕ್ತಿ ಉಂಟಾಗಲಿದೆ. ಹಣದ ಕೊರತೆ ಇರುವುದಿಲ್ಲ. ಗುರು ಹಿರಿಯರನ್ನು ಗೌರವಿಸುವ ಅವಕಾಶ ದೊರೆಯುತ್ತದೆ.

ವೃಶ್ಚಿಕ ರಾಶಿ : ಮಾನಸಿಕ ಶಕ್ತಿ ಹೊಸ ಆಸೆಗಳಿಗೆ ಕಾರಣವಾಗಲಿದೆ. ಉದ್ಯೋಗದಲ್ಲಿ ಹೊಸಬರಿಗೆ ತರಬೇತಿ ನೀಡುವ ಜವಾಬ್ದಾರಿ ದೊರೆಯುತ್ತದೆ. ದೊರೆಯುವ ಅವಕಾಶವನ್ನು ಬಳಸಿಕೊಂಡು ಹೊಸ ವ್ಯಾಪಾರೀ ಸಂಸ್ಥೆಯನ್ನು ಆರಂಭಿಸುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಆಶಾದಾಯಕ ವಿಚಾರ ಇರುತ್ತದೆ. ಕಲಿಕೆಯಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದಿನನಿತ್ಯದ ಆದಾಯವು ಹೆಚ್ಚುತ್ತದೆ.

ಧನು ರಾಶಿ : ಉದ್ಯೋಗದಲ್ಲಿ ಸ್ಥಿರತೆ ಕಂಡುಬರುತ್ತದೆ. ಆದರೆ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ಹಣದ ತೊಂದರೆ ಬಾರದು. ಸಹನೆಯಿಂದ ವರ್ತಿಸುವುದು ಒಳ್ಳೆಯದು. ಸಣ್ಣ ಪುಟ್ಟ ವಿಚಾರಗಳಲ್ಲೂ ಅಸಹನೆ ಮತ್ತು ಉದ್ವೇಗದಿಂದ ವರ್ತಿಸುವಿರಿ. ಷೇರಿನಲ್ಲಿ ಹಣ ಹೂಡಿಕೆ ಮಾಡದಿರಿ. ನೌಕರರಿಗೆ ವಿಶೇಷವಾದ ಸೌಲಭ್ಯ ದೊರೆಯುತ್ತದೆ. ಶುಭಕರ ಕೆಲಸವೊಂದನ್ನು ಪೂರೈಸುವಿರಿ. ಸರ್ಕಾರದ ಸಹಾಯದಿಂದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಬಹುದು.

ಮಕರ ರಾಶಿ : ಉದೋಗದಲ್ಲಿ ಆತಂಕದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಸಹನೆ ಮತ್ತು ಬುದ್ದಿವಂತಿಕೆಯಿಂದ ಸಮಸ್ಯೆಯಿಂದ ಹೊರಬರಬಹುದು. ವಿದ್ಯಾರ್ಥಿಗಳು ನಿಧಾನಗತಿಯಲ್ಲಿ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಕಾರ್ಮಿಕ ವಲಯದವರು ತಮ್ಮ ಕಾರ್ಯ ದಕ್ಷತೆಗೆ ವಿಶೇಷವಾದ ಶ್ಲಾಘನೆಯನ್ನು ಪಡೆಯಲಿದ್ದಾರೆ. ಬೃಹತ್ ಯಂತ್ರಗಳ ದುರಸ್ತಿ ಮಾಡುವ ಸೇವಾವೃತ್ತಿ ಲಾಭದಾಯಕ. ಅನಿವಾರ್ಯವಾಗಿ ವೃತ್ತಿ ಬದಲಾವಣೆ ಮಾಡುವಿರಿ. ಸಂತಾನ ಲಾಭವಿದೆ.

ಕುಂಭ ರಾಶಿ : ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ ಇರುತ್ತದೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸಿ ಎಲ್ಲರ ಗಮನ ಗಳಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ವಿಶೇಷವಾದ ಸ್ಥಾನ ಮತ್ತು ವರಮಾನ ಇರಲಿದೆ. ಕಾರ್ಮಿಕ ವಲಯದವರ ಕಾರ್ಯ ದಕ್ಷತೆಗೆ ವಿಶೇಷವಾದ ಶ್ಲಾಘನೆ ದೊರೆಯುತ್ತದೆ. ಸೇವಾಧಾರಿತ ಉದ್ಯೋಗವು ಲಾಭದಾಯಕ. ಅನಿವಾರ್ಯವಾಗಿ ವೃತ್ತಿ ಬದಲಾವಣೆ ಮಾಡುವಿರಿ. ಸಂತಾನ ಲಾಭವಿದೆ.

ಮೀನ ರಾಶಿ : ಸಮಯಕ್ಕೆ ತಕ್ಕಂತಹ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಆದರೆ ನಿಮ್ಮ ಮಕ್ಕಳ ಸಹಾಯ ಸದಾ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ವಿಪತ್ತಿನಿಂದ ದೂರವಾಗುವಿರಿ. ಕುಟುಂಬದ ಒಟ್ಟಾರೆ ಆದಾಯವು ಹೆಚ್ಚಲಿದೆ. ನಿಮ್ಮ ಮಾತಿನ ದಾಟಿ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಅವಿವಾಹಿತರಿಗೆ ಸಂಬಂಧದಲ್ಲಿ ವಿವಾಹವಾಗುತ್ತದೆ. ಹೊಗಳಿಕೆಗೆ ಮರುಳಾಗಿ ಮೋಸ ಹೋಗದಿರಿ. ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗುತ್ತವೆ.