suddibindu.in
ಕಾರವಾರ : ನೆರೆಯ ಗೋವಾ ರಾಜ್ಯಕ್ಕೆ(Goa)ಬರುವ ವಿದೇಶಿ ಪ್ರವಾಸಿಗರಿಗೆ ಕಪ್ಪೆ ಮಾಂಸ ಅಂದರೆ ಫೇವರೇಟ್. ಈ ಹಿನ್ನಲೆಯಲ್ಲಿ ಕರಾವಳಿ ಕಪ್ಪೆಗಳಿಗೆ ಸಾಕಷ್ಟು ಡಿಮ್ಯಾಂಡ್ ಬಂದಿದ್ದು ಕರ್ನಾಟಕದ ಗಡಿ ಭಾಗದಲ್ಲಿರುವ ಕಾರವಾರದಿಂದ ಭಟ್ಕಳದವರೆಗೆ ಕಪ್ಪೆಗಳನ್ನು ಹಿಡಿದು ಸಾಗಿಸುವ ವ್ಯವಸ್ಥಿತ ಜಾಲ ಜೋರಾಗಿ ಮಳೆಗಾಲದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮಳೆಗಾಲ ಪ್ರಾರಂಭ ಅದರೆ ಪರಿಸರ ಮಿತ್ರ ಕಪ್ಪೆಗೆ ಕರಾವಳಿ ಭಾಗದಲ್ಲಿ ಸಾಕಷ್ಟು ಬೇಡಿಕೆ ಪ್ರಾರಂಭವಾಗುತ್ತದೆ. ಗೋವಾದಲ್ಲಿ ಕಪ್ಪೆ ಖಾದ್ಯಕ್ಕೆ ಸಕತ್ ಡಿಮ್ಯಾಂಡ್ ಇದೆ. ಪ್ರವಾಸಿಗರ ಸ್ವರ್ಗ tourist ಎಂದೇ ಕರೆಸಿಕೊಂಡ ಗೋವಾದಲ್ಲಿನ ರೆಸಾರ್ಟ್ ಗಳಿಗೆ ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇನ್ನು ಮಳೆಗಾಲದಲ್ಲಿ ಸಿಗುವ ತಾಜಾ ಕಪ್ಪೆಗಳನ್ನ ಹಿಡಿದು ಖಾದ್ಯ ಮಾಡಿಕೊಟ್ಟರೇ ಪ್ರವಾಸಿಗರನ್ನ ಸಹ ಆಕರ್ಷಿಸಲು ಸಹಕಾರಿಯಾಗುತ್ತದೆ.
ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಯಾದ ಕಾರವಾರದಲ್ಲಿ ಕಪ್ಪೆಗಳನ್ನ ಹಿಡಿದು ಗೋವಾಕ್ಕೆ ಸಾಗಿಸುವ ಜಾಲ ಆಕ್ಟೀವ್ ಆಗಿದೆ. ಕಳೆದ ಹಲವು ವರ್ಷಗಳಿಂದ ಈ ಜಾಲ ಕಪ್ಪೆ ಸಾಗಾಟ ಮಾಡುತ್ತಲೇ ಬರುತ್ತಿದೆ. ಈ ಬಾರಿ ಸಹ ಸಾಗಾಟ ಮಾಡುವಾಗ ಕಾರವಾರದ ಕಾಳಿ ನದಿ ಸೇತುವೆ ಬಳಿ ಗೋವಾಕ್ಕೆ ಸಾಗುತ್ತಿದ್ದ ಬಸ್ಸಿನಲ್ಲಿ ಕಪ್ಪೆ ಸಾಗಾಟ ಮಾಡುವಾಗ ಅರಣ್ಯ ಇಲಾಖೆಯವರು ಹಿಡಿದು ನೂರಾರು ಕಪ್ಪೆಗಳನ್ನ ರಕ್ಷಣೆ ಮಾಡಲಾಗಿದೆ.
ಮಾಂಸಕ್ಕಾಗಿ ಕಪ್ಪೆಗಳನ್ನು ಸಾಯಿಸುತ್ತಿರುವುದರಿಂದ ಅವುಗಳ ಸಂತತಿ ಕ್ಷೀಣಿಸುವ ಭಯ ಆರಂಭವಾಗಿದೆ. ಕಪ್ಪೆಗಳ ನಿರಂತರ ಮಾರಣ ಹೋಮದಿಂದಾಗಿ ಅವುಗಳ ಸಂಖ್ಯೆ ಕಡಿಮೆಯಾದರೆ ಪರಿಸರದ ಜೀವ ವೈವಿಧ್ಯತೆಗೆ ಧಕ್ಕೆಯುಂಟಾಗುವ ಆತಂಕ ಎದುರಾಗಿದೆ. ಇವುಗಳನ್ನು ಆಹಾರವನ್ನಾಗಿ ಬಳಸುವ ಇತರೆ ಜೀವಿಗಳು ಆಹಾರಕ್ಕಾಗಿ ಪರದಾಡುವ ಆತಂಕ ಎದುರಾಗಿದ್ದು, ಕಾನೂನಿಗೆ ವಿರುದ್ಧವಾಗಿ ಕಪ್ಪೆಗಳನ್ನು ಮಾಂಸಕ್ಕಾಗಿ ಬಳಕೆ ಮಾಡುವುದನ್ನು ತಡೆಯಬೇಕಿದೆ.
ಪರಿಸರದಲ್ಲಿ ಕಪ್ಪೆಗಳು ಕ್ರಿಮಿ ಕೀಟಗಳನ್ನು ತಿನ್ನುವುದರಿಂದ ಸೊಳ್ಳೆ ಸೇರಿದಂತೆ ಮನುಷ್ಯನಿಗೆ ತೊಂದರೆ ಕೊಡುವ ಇತರೆ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತವೆ. ಅಲ್ಲದೆ ಜಮೀನಿನಲ್ಲಿ ಬೆಳೆಗಳಿಗೆ ತಗುಲುವ ಕೀಟಗಳ ಹತೋಟಿಗೆ ತರಲು ಇವುಗಳ ಪಾತ್ರ ಮಹತ್ವದಾಗಿದೆ. ಹೀಗಿರುವಾಗ ಇವುಗಳ ನಾಶದಿಂದ ಪರಿಸರದ ಜೀವ ವೈವಿಧ್ಯತೆ ಏರುಪೇರಾಗುವ ಆತಂಕ ಎದುರಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಗೋವಾ ಗಡಿಯಲ್ಲಿ ಹದ್ದಿನ ಕಣ್ಣಿಟ್ಟರೇ ಕಪ್ಪೆಗಳ ವಿನಾಶವನ್ನ ತಡೆಯಲು ಸಾಧ್ಯವಾಗಲಿದೆ.