suddibindu.in
ಕಾರವಾರ :ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಸೋಲಾಗಿರುವುದರಿಂದ ಈ ಹಿಂದೆ ಯಾವ ಸಚಿವರ ತಲೆ ದಂಡವಾಗಿಲ್ಲ ಹಾಗಾಗಿ ನನ್ನ ತಲೆ ದಂಡವಾಗುವ ಪ್ರಶ್ನೆಯೆ ಇಲ್ಲ ಎಂದು ಸಚಿವ ಮಂಕಾಳು ವೈದ್ಯ ಅವರು ಹೇಳಿದರು.

ಜಿಲ್ಲಾ ಪಂಚಾಯತ ತ್ರೈಮಾಸಿಕ ಸಭೆಗೆ ಆಗಮಿಸಿದ ಸಚಿವ ಮಂಕಾಳು ವೈದ್ಯ ಅವರನ್ನ ಮಾಧ್ಯಮದವರು ಪ್ರಶ್ನೆ ಮಾಡಿ ಲೋಕಸಭೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾಗಿದೆ ಹೀಗಾಗಿ ತಮ್ಮ ಸಚಿವ ಸ್ಥಾನ ಕೈ ತಪ್ಪಲಿದೆ ಎನ್ನುವ ಚರ್ಚೆ ಕೇಳಿ ಬರುತ್ತಿದೆ ಎಂದು ಪ್ರಶ್ನ ಮಾಡಿದ್ದರು.ಇದಕ್ಕೆ ಉತ್ತರಿಸಿದ ಸಚಿವರು ನಮ್ಮ ಜಿಲ್ಲೆಯಲ್ಲಿ ಕಳೆದ ಮೂವತ್ತು ವರ್ಷದಿಂದಲ್ಲೂ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಆದರೆ ಅಷ್ಟು ವರ್ಷದಲ್ಲಿ ಹಿಂದೆ ಇದ್ದ ಯಾವ ಸಚಿವರ ತಲೆದಂಡವಾಗಿಲ್ಲ. ಹೀಗಾಗಿ ನನ್ನ ತಲೆದಂಡವಾಗುವ ಯಾವುದೇ ಪ್ರಶ್ನೆ ಇಲ್ಲ.

ಇದನ್ನೂ ಓದಿ

ಅವರ ಮಾತಿನ ಅರ್ಥದಲ್ಲಿ ಈ ಹಿಂದೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆದಾಗಲ್ಲೆಲ್ಲಾ ಇಲ್ಲಿ ದೇಶಪಾಂಡೆ ಅವರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗಲು ಸಹ ಅವರ ತಲೆ ದಂಡವಾಗಿಲ್ಲ ಎನ್ನುವ ಮೂಲಕ ದೇಶಪಾಂಡೆ ಅವರ ಹೆಸರನ್ನ ಪ್ರಸ್ತಾಪಿಸದೆ ಪರೋಕ್ಷವಾಗಿ ಕುಟುಕಿದರು.