ಕಾರವಾರ: ಮಾಜಿ ಶಾಸಕನ ಮೇಲೆ ಹಾಲಿ ಶಾಸಕಿ ಜಿಲ್ಲಾ ಪಂಚಾಯತಿ ಸಭಾಭವನದಲ್ಲೇಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಮಾಜಿ ಶಾಸಕ ಸತೀಶ್ ಸೈಲ್‌ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಷ್ಟೇ ಅಲ್ಲದೇ, ಹಲ್ಲೆಗೂ ಯತ್ನಿಸಿರುವುದಾಗಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಆರೋಪಿಸಿದ್ದಾರೆ.

ಸತೀಶ್ ಸೈಲ್ ಕಾರವಾರ ತಾಲೂಕಿನ ಮಾಜಾಳಿ ಪಂಚಾಯತಿ ಪಿಡಿಓ ಬದಲಾವಣೆಗೆ ಸಂಬಂಧಿಸಿದಂತೆ ಸಿಇಒ ಜೊತೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಸಭೆಯಲ್ಲಿ ಮಧ್ಯಪ್ರವೇಶಿಸಿದ ಶಾಸಕಿ, ಸಿಇಒ ಕರೆದು ತಾವು ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ವೇಳೆ ಸಭೆಯಲ್ಲಿದ್ದ ಅಧಿಕಾರಿಯೋರ್ವರು ಮಾಜಿ ಶಾಸಕರ ಬಳಿ ತಿರುಗಿ ನೋಡಿದರೆಂದು, ಅವರನ್ನೇನು ನೋಡುತ್ತೀರಿ? ಅವರು ಕುಡುಕ ಎಂದೆಲ್ಲ ನಿಂದಿಸಿರುವುದಾಗಿ ಶಂಭು ಶೆಟ್ಟಿ ಆರೋಪಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದು ಸೈಲ್ ಕುಡಿಯೋದಕ್ಕೆ ನಿಮ್ಮಪ್ಪ ಹಣ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡು ಶಾಸಕಿ ರೂಪಾಲಿ ನಾಯ್ಕ ಮೇಜಿನ ಮೇಲಿದ್ದ ಪೇಪರ್ ವೇಟೇಜ್ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾದರು ಎಂದು ಆರೋಪಿಸಿದ್ದಾರೆ.