suddibindu.in
ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಕಳೆದ ಹತ್ತುವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಹೆದ್ದಾರಿ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ರಾಷ್ಟೀಯ ಹೆದ್ದಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವ ಮಂಕಾಳು ವೈದ್ಯ ನಿಮ್ಮಗೆ ಮಾನ ಮರ್ಯಾದೆ ಇದೇಯಾ ಎಂದು ಖಾರವಾಗಿ ಮಾತ್ನಾಡಿದರು.

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.ಕಾರವಾರದ ಮಾಜಾಳಿಯಿಂದ ಭಟ್ಕಳದ ಶಿರಾಲಿ ತನಕ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನ ಕಳೆದ ಹತ್ತು ವರ್ಷದಿಂದ ಮಾಡಲಾಗತ್ತಾ ಇದೆ.ಆದರೆ ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ.ಅಪೂರ್ಣ ಕಾಮಗಾರಿಯಿಂದ ನಿತ್ಯವೂ ಹೆದ್ದಾರಿಯಲ್ಲಿ ಜನ ಸಾಯತ್ತಾ ಇದ್ದಾರೆ. .ಹೆದ್ದಾರಿ ಅಗಲೀಕರ ಕಾಮಗಾರಿ ಕೈಗೊಂಡ ಕಂಪನಿ ಸರಿಯಗಿ ಕೆಲಸ ಮಾಡತ್ತಾ ಇಲ್ಲ.‌ಕಾಮಗಾರಿ ಪೂರ್ವಣವಾಗದೆ ಶುಲ್ಕ ವಸೂಲಿ ಮಾಡತ್ತಾ ಇದ್ದಾರೆ. ಕಾಮಗಾರಿ ಪೂರ್ಣ ಮಾಡಿದಕ್ಕೆ ಇನ್ನೂ ಎಷ್ಟ ವರ್ಷ ಬೇಕು ಎಂದು ಪ್ರಶ್ನೆ ಮಾಡಿದರು.ಇನ್ನೂ ಯಾಕೆ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳತ್ತಾ ಇಲ್ಲ.

ಇದನ್ನೂ ಓದಿ

ಇದಕ್ಕೆ ಉತ್ತರಿಸಿದ ರಾಷ್ಟೀಯ ಹೆದ್ದಾರಿ ಅಧಿಕಾರಿ ಜಿಲ್ಲೆಯಲ್ಲಿ ಜಲ್ಲಿ ಸಮಸ್ಯೆ ಉಂಟಾಗಿ ಕಾಮಗಾರಿ ಮಾಡಲು ಸಾಧ್ಯವಾಗತ್ತಾಲ್ಲ. ಜಿಲ್ಲೆಯ ಎಲ್ಲಿಯೂ ಕಲ್ಲು ಸಿಗತ್ತಾ ಇಲ್ಲ ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿರುವುದಾಗಿ ಉತ್ತರಿಸಿದರು. ಇದಕ್ಕೆ ಸಚಿವ ಮಂಕಾಳು ವೈದ್ಯ ಅವರು ಹೆದ್ದಾರಿ ಪಕ್ಕದಲ್ಲಿ ಸಾಕಷ್ಟು ಜಲ್ಲಿ-ಕಲ್ಲಿ ರಾಶಿ ಇದೆ. ಅದನ್ನ ಬಳಿಸಿಕೊಳ್ಳಲು ಆಗತ್ತಾ ಇಲ್ಲ. ಆ ಜಲ್ಲಿ ಕಲ್ಲು ಬೇರೆ ಕಡೆ ಮಾರಾಟ ಮಾಡತ್ತಿದ್ದಾರಾ.? ಎಂದು ಪ್ರಶ್ನೆ ಮಾಡಿದ ಸಚಿವರು ತಕ್ಷಣದಿಂದ ಹೆದ್ದಾರಿ ಬದಿಯಲ್ಲಿರುವ ಎಲ್ಲಾ ಜಲ್ಲಿಗಳನ್ನ ಸೀಜ್ ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿಯಿಂದಾಗಿ ಯಾವುದೇ ಸಮಸ್ಯೆ ಆದರೂ ಹೆದ್ದಾರಿ ಇಲಾಖೆ ಹಾಗೂ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಹೊಣೆ ಹೊರಬೇಕಾಗುತ್ತದೆ ಎಂದರು.