1) ಡಾ. ಅಂಜಲಿ ನಿಂಬಾಳ್ಕರ್ ಒಂದು ಸುಶಿಕ್ಷಿತ ಹೆಣ್ಣು ಮಗಳು. ಅವರ ಬಹು ಭಾಷಾ ಕೌಶಲ್ಯದಿಂದಾಗಿ, ಕ್ಷೇತ್ರದ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಮತ್ತು ಸಂಸತ್ತಿನಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿ ಎತ್ತುವ ಸಾಮರ್ಥ್ಯ ಹೊಂದಿದವರು.

2) ಇದುವರೆಗೆ ಕೇವಲ ಕೋಮುವಾದದ ಪ್ರಯೋಗಶಾಲೆಯಾಗಿದ್ದ ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್ ಅಭಿವೃದ್ಧಿ ರಾಜಕಾರಣದ ಮಾತನಾಡುತ್ತಿರುವುದು ಹೊಸ ಆಶಾಕಿರಣವಾಗಿದೆ.

ಇದನ್ನೂ ಓದಿ

3) ಸಾಗರದಂಚಿನ ಮತ್ತು ಕಾಡಿನಂಚಿನ ಜನರ ಆಶೋತ್ತರಗಳಿಗೆ ಈ ವರೆಗೆ ಯಾವತ್ತೂ ಸ್ಪಂದಿಸದ ಕ್ಷೇತ್ರದ ರಾಜಕೀಯ ವ್ಯವಸ್ಥೆಗೊಂದು ಪರ್ಯಾಯ ಚಿಂತನೆ ಅಂಜಲಿ ಆಗಿದ್ದಾರೆ.

4) ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಬೇಕೆಂಬ ಹಲವು ವರ್ಷಗಳ ಕೂಗು ಅರಣ್ಯ ರೋದನವಾಗಿಯೇ ಉಳಿದಿದೆ. ಸ್ವತಹ ವೈದ್ಯೆಯಾಗಿರುವ ಅಂಜಲಿ ಆಸ್ಪತ್ರೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ.

5) ಜಿಲ್ಲೆಯ ಮೀನುಗಾರಿಕೆಗೆ ಪೂರಕವಾದ ಮೂಲಭೂತ ಸೌಕರ್ಯದ ಅಭಿವೃದ್ದಿ ಮತ್ತು ಮೀನುಗಾರರಿಗೆ ವಸತಿಯ ಸಮಸ್ಯೆಗಳ ಒಂದು ಹಿಂದುಳಿದ ಮಹಿಳೆಯಾಗಿ ಅರ್ಥೈಸಿಕೊಂಡಿದ್ದಾರೆ.

6) ಜಿಲ್ಲೆಯ – ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುವಂತಹ ರಾಜ್ಯ ಅಥವಾ ರಾಷ್ಟ್ರ ಮಟ್ಟದ ಕ್ರೀಡಾ ತರಬೇತಿ ಕೇಂದ್ರ ಅಥವಾ ಕ್ರೀಡಾ ವಸತಿ ಶಾಲೆ ಮಾಡಲು ಅಂಜಲಿ ಗೆಲ್ಲಬೇಕು.

7) ಜಿಲ್ಲೆಯ ಅತಿಕ್ರಮಣ ಅರಣ್ಯವಾಸಿಗಳಿಗೆ ಸೂಕ್ತ ರಕ್ಷಣೆ ಮತ್ತು ಭೂಮಿ ಹಕ್ಕು ಪತ್ರದ ಭರವಸೆ ಅಂಜಲಿ ನೀಡಿದ್ದಾರೆ.

8) ಜಿಲ್ಲೆಯ ಬುಡಕಟ್ಟು ಸಮದಾಯಗಳ ಮೂಲ ಸಮಸ್ಯೆಗಳನ್ನು ಅರಿತಿರುವ ಅಂಜಲಿ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಸಂಪೂರ್ಣ ಭರವಸೆ ನೀಡಿದ್ದಾರೆ.

9) ಬುದ್ಧಿವಂತ ಜಿಲ್ಲೆಯ ಯುವ ಸಮುದಾಯ ಬೆಂಗಳೂರಿನಂತಹ ದೂರದ
ನಗರಗಳಿಗೆ ವಲಸೆ ಹೋಗಿ ಆಗುತ್ತಿರುವ ಸಾಮಾಜಿಕ ಅಸಮತೋಲನವನ್ನು ಸ್ಥಳೀಯ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಸಾಮಾಜಿಕ ಸಮತೋಲನ ಕಾಪಾಡಲು ಅಂಜಲಿ ಗೆಲ್ಲಬೇಕು.

10) ಜಾಗತಿಕವಾಗಿ ಗುರುತಿಸಲ್ಪಡುವ ಪ್ರವಾಸೀ ಕೇಂದ್ರಗಳು ಉತ್ತರ ಕನ್ನಡದಲ್ಲಿದೆ. ಜೊತೆಗೆ ಕಡಲತೀರವೂ ಇದೆ. ಪ್ರವಾಸೋದ್ಯಮ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಿಂಬಾಳ್ಕರ ಆಯ್ಕೆಯ ಮೂಲಕ ಪ್ರವಾಸೋದ್ಯಮ ಮತ್ತು ಅದರಿಂದ ಉದ್ಯೋಗ ನಿರ್ಮಾಣ ಸಾಧ್ಯವಿದೆ.

ಒಟ್ಟಾರೆ ಕಳೆದ 3 – 4 ದಶಕಗಳಿಂದ ಜಿಲ್ಲೆಯ ಸಮಸ್ಯೆಯಾದಾರಿತವಾಗಿ ಚುನಾವಣೆಗಳೆ ನಡೆಯದೇ ಕೇವಲ ಧರ್ಮದ, ಜಾತಿಯ ಮತ್ತು ದ್ವೇಷದ ವಿಷಯಗಳ ಮೇಲೆ ಚುನಾವಣೆ ನಡೆದದ್ದರಿಂದ ಜಿಲ್ಲೆಯ ಅಭಿವೃದ್ದಿ ಕುಂಟಿತವಾಗಿದೆ. ವೈದ್ಯೆಯಾದ ಅಂಜಲಿ ನಿಂಬಾಲ್ಕರ್ ಜಿಲ್ಲೆಯ ನೈಜ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ ಆ ಕಾರಣಕ್ಕೆ ಅಂಜಲಿ ನಿಂಬಾಳ್ಕರ್ ಗೆಲ್ಲಲೇಬೇಕು.

ಲೋಹಿತ್ ನಾಯ್ಕ
ಚಿಂತಕ – ಸಾಮಾಜಿಕ ಕಾರ್ಯಕರ್ತ.