ಸುದ್ದಿಬಿಂದು ಬ್ಯೂರೋ

ಕಾರವಾರ: ರಾಮಮಂದಿರ ವಿಷಯವನ್ನು ಭಾರತೀಯ ಜನತಾ ಪಕ್ಷ ರಾಜಕೀಕರಣಗೊಳಿಸುತ್ತಿದೆ ಎಂದು ಕಾರವಾರದಲ್ಲಿ ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಆರೋಪಿಸಿದರು.

ಕಾರವಾರದಲ್ಲಿ ಅವರು ಮಾಧ್ಯಮಗಳ ಜೊತೆ ಬುಧುವಾರ ಮಾತನಾಡಿದರು.
ದಿಶಾ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಭೀಮಣ್ಣ ನಾಯ್ಕ ನಾನು ಸಹ ಹಿಂದೂ. ರಾಮ ನಮಗೆಲ್ಲಾ ದೇವರು. ರಾಮಾಯಣ ಕಾಲದಿಂದಲೂ ಈ ದೇಶದ ಜನ ರಾಮನನ್ನು ಆರಾಧಿಸಿದ್ದಾರೆ‌ . ರಾಮಮಂದಿರ ಸಮಸ್ತ ಹಿಂದೂ ಸಮಾಜಕ್ಕೆ ಸೇರಿದ್ದು. ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದ ಸಂಗತಿ. ಆದರೆ ಈ ಹಂತದಲ್ಲಿ ರಾಜಕೀಯ ಲಾಭಕ್ಕೆ ಬಿಜೆಪಿ ಪ್ರಯತ್ನ ಮಾಡುವುದು ದುರಂತ ಎಂದರು.

ಬಿಜೆಪಿ ಎಲೆಕ್ಷನ್ ಹತ್ರ ಬಂದಾಗ ವಿವಾದ ಬೇಕಾಗುತ್ತದೆ. 2018 ರಲ್ಲಿ ಪರೇಶ್ ಮೇಸ್ತಾ ವಿವಾದ ಎಬ್ಬಿಸಿತು. ಆದರೆ ಸಿಬಿಐ ತನಿಖೆ ನಂತರ ಅದು ಸಹಜ ಸಾವು ಎಂದು ವರದಿ ಬಂತು. ಈಗ ಲೋಕಸಭಾ ಚುನಾವಣಾ ಸಮಯ. ಯಾವುದಾದರೂ ಭಾವನಾತ್ಮಕ ವಿಷಯಕ್ಕೆ ಬಿಜೆಪಿ ಕಾಯುತ್ತದೆ ಎಂದು ಭೀಮಣ್ಣ ಆರೋಪಿಸಿದರು. ಹರಿಪ್ರಸಾದ್ ಅವರು ಗೋದ್ರಾ ತರಹದ ಘಟನೆಗೆ ಬಿಜೆಪಿ ಸಂಚು ರೂಪಿಸಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಭೀಮಣ್ಣ ನಾಯ್ಕ, ಬಿಜೆಪಿ ಇತಿಹಾಸವೇ ಇದಕ್ಕೆ ಸಾಕ್ಷಿ. ಅವರ ಒಟ್ಟು ನಡೆ ಜನರನ್ನು ಕೆರಳಿಸುವುದು. ಇದಕ್ಕೆ ಜನ ಹೆಚ್ಚಿನ ಮಹತ್ವ ನೀಡಬಾರದು. ಅಭಿವೃದ್ಧಿ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಬಿಜೆಪಿ ಚುನಾವಣಾ ಸಮಯ ಬಿಟ್ಟು ಉಳಿದ ಸಮಯದಲ್ಲಿ ವಿಷಯ ಎತ್ತಲಿ ನೋಡೋಣ ಎಂದರು.ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ದಮ್ಮಿದ್ದರೆ ಎಂದು ಕೆನರಾ ಸಂಸದ ಸವಾಲು ಹಾಕಿದ್ದಾರಲ್ಲ ಎಂಬ ಪ್ರಶ್ನೆಗೆ, ಜನ ಕಳೆದ ವಿಧಾನ ‌ಸಭಾ ಚುನಾವಣೆಯಲ್ಲಿ ದಮ್ಮು ತೋರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಏನೆಂದು ಗೊತ್ತಾಗಿದೆ. ಅಷ್ಟು ಸಾಕು ಎಂದರು.

ಲೋಕಸಭಾ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮಲ್ಲಿ ಅಭ್ಯರ್ಥಿ ಗಳಿಗೆ ಕೊರತೆ ಇಲ್ಲ ಎಂದರು. ಶಿವರಾಮ ಹೆಬ್ಬಾರ್ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನಮ್ಮ ಪಕ್ಷದಲ್ಲಿ ಇಲ್ಲ. ಹಾಗಾಗಿ ಅವರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

ಇನ್ನೂ ಓದಿ:- ರೈಲ್ವೆ ಬೋಗಿಯಲ್ಲಿ ಅಸಭ್ಯ ವರ್ತನೆ