suddibindu.in
ಯಲ್ಲಾಪುರ: ಪ್ರವಾಸಕ್ಕಾಗಿ ಸಾತೊಡ್ಡಿ ಜಲಪಾತಕ್ಕೆ (Sathodti Falls) ಬಂದಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿ ಓರ್ವ ಜಲಪಾತದ ಸುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯ ಹಸನ್ (36) ಎಂಬಾತನೆ ಮೃತ ಯುವಕನಾಗಿದ್ದಾನೆ.ಹುಬ್ಬಳ್ಳಿ ಮೌಲಾಲಿ ದರ್ಗಾ ಬಳಿ ನಿವಾಸಿಯಾಗಿದ್ದ ಈತ ಕೂಲಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ಸಂಜೆ ತನ್ನ ಸಂಬoಧಿಕರು ಹಾಗೂ ಸ್ನೇಹಿತರ ಜೊತೆ ಸಾತೊಡ್ಡಿ ಜಲಪಾತಕ್ಕೆ ಬಂದಿದ್ದ, ಈ ವೇಳೆ ಈಜಾಡಲು ಜಲಪಾತಕ್ಕೆ ಇಳಿದ್ದಾನೆ. ನೀರಿಗೆ ಇಳಿದ ಈತನ ಕಾಲು ಜಾರಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..