ಸುದ್ದಿಬಿಂದು ಬ್ಯೂರೋ
ಹಾವೇರಿ :
ಶಾಲೆ‌ ಮುಗಿಸಿ ವಾಪಸ್ ಬಸ್ ನಲ್ಲಿ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿ ಓರ್ವಳು ಬಸ್ ಮೇಲಿನಿಂದ ರಸ್ತೆಯಲ್ಲಿ ಬಿದ್ದು ಪಟ್ಟಿರುವ ಘಟನೆ ಹಾನಗಲ್ ನಲ್ಲಿ ನಡೆದಿದೆ.

ಘಟನೆಯಲ್ಲಿ 14ವರ್ಷ ಮಧು ಕುಂಬಾರ ಎಂಬಾಕೆಯೆ ಮೃತ ಪಟ್ಟಿರುವ ವಿದ್ಯಾರ್ಥಿನಿಯಾಗಿದ್ದಾಳೆ.ಈಕೆ ಹಾನಗಲ್ ತಾಲೂಕಿನ ವಾಸನ ಗ್ರಾಮದಿಂದ ಕುಸುನೂರು ಪ್ರೌಢಶಾಲೆಗೆ ಹೋಗಿ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ವಿದ್ಯಾರ್ಥಿನಿ ಸಂಚರಿಸುವ ಬಸ್ ಪ್ರಯಾಣಿಕರಿಂದ ತುಂಬಿಕೊಂಡಿತ್ತು. ಇದರಿಂದ ವಿಧ್ಯಾರ್ಥಿನಿ ಮಧು ಬಸ್ ನ ಬಾಗಿಲ ಬಳಿ ನಿಂತುಕೊಂಡಿದ್ದಳು.

ಕುಸನೂರು ಗ್ರಾಮದ ಬಳಿ ಬಸ್ ತಿರುಗಿಸುವ ವೇಳೆಯಲ್ಲಿ ಬಸ್ ನ ಬಾಗಿಲು ಹಾಕದೆ ಇರುವುದರಿಂದ ಬಾಗಿಲ ಬಳಿಯೇ ನಿಂತಿದ್ದ ಮಧುರಾ ಬಸ್ ನಿಂದ ಕೆಳಕ್ಕೆ ಬಿದ್ದಿದ್ದು, ಇದರಿಂದಾಗಿ ಆಕೆಯ ತಲೆಗೆ ಗಂಭೀರವಾಗಿ ಗಾಯಗೊಂಡು ಆಕೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಆಕೆಯ ಊರಿನಲ್ಲಿ ಸರಿಯಾದ ಶಾಲೆ‌ ಇಲ್ಲದೆ ಇರುವ ಕಾರಣ ಆಕೆಯ ಪಾಲಕರು ಕುಸನೂರು ಶಾಲೆಗೆ ಕಳುಹಿಸಿದ್ದರು ಎನ್ನಲಾಗಿದೆ.

ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೆ ಬೆಳೆ ಹೆತ್ತವರಿಗೆ ಆಸರೆ ಆಗಬೇಕು ಎಂದು ನೂರಾರು ಕನಸುಗಳನ್ನ ಇಟ್ಟು ಕೊಂಡ‌ ಮಧು ಇದೀಗ ಬಾರದ ಲೋಕಕ್ಕೆ ಹೋಗಿದ್ದಾಳೆ..ಇದೀಗ ಮೃತ ವಿದ್ಯಾರ್ಥಿನಿ ಮಧು ಆತ್ಮಕ್ಕೆ ದೇವರು ಶಾಂತಿ ನೀಡಿಲಿ ಎಂದು ಪ್ರಾರ್ಥಿಸೋಣ.