suddibindu.in
Dandeli:ದಾಂಡೇಲಿ : ಉತ್ತರ ಕನ್ನಡ (uttar kannada) ಜಿಲ್ಲೆಯ ದಾಂಡೇಲಿಯಲ್ಲಿ ಸರಕಾರದಿಂದ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಹಾರ್ಲ್‌ಬಿಲ್ (Harlebill) ಉತ್ಸವ ಮಾಡಲಾಗುತ್ತಿದ್ದು, ಈ ಬಾರಿಯ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ‌
.

ಕಳೆದ ಐದಾರು ವರ್ಷಗಳಿಂದ ಪ್ರತಿ ವರ್ಷ ಕೂಡ ದಾಂಡೇಲಿಯಲ್ಲಿ ಎರಡು ದಿನಗಳ ಕಾಲ ಈ ಹಾರ್ನಲ್ ಬಿಲ್ ಉತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ವರ್ಷ ಕಳೆದಂತೆ ಹಾರ್ನ್ ಬಿಲ್ ಉತ್ಸವಕ್ಕೆ ಬರುವವರ ಸಂಖ್ಯೆಯಲ್ಲಿ ಸಹ ಸಾಕಷ್ಟು ಸಂಖ್ಯೆಯಲ್ಲಿ ಇಳಿ ಮುಖವಾಗುತ್ತಿದೆ. ಜನರು ಆಗಮಿಸುವುದಲ್ಲಿ ಎಂದು ದಾಂಡೇಲಿ ಸುತ್ತಮುತ್ತಲಿನ ಒಂದಿಷ್ಟು ಕಾಲೇಜು ವಿದ್ಯಾರ್ಥಿಗಳನ್ನ ಕರೆಸಿಕೊಂಡಿದ್ದಾರೆನ್ನಲಾಗಿದೆ. ಅಷ್ಟೆ ಅಲ್ಲದೆ ಜಿಲ್ಲೆಯ ಎಲ್ಲಾ ಅರಣ್ಯ ಇಲಾಖೆಯ ಕಚೇರಿಯಲ್ಲಿ ಇರುವ ಹಿರಿಕಿರಿಯ ಅಧಿಕಾರಿಗಳ ಉತ್ಸವಕ್ಕೆ ಕರೆಸಿಕೊಂಡು ಜನರ ಪ್ರದರ್ಶನ ಮಾಡಿದ್ದಾರೆ.

ಪ್ರತಿವರ್ಷ ಈ ಉತ್ಸವಕ್ಕೆ ಆಗಮಿಸಲು ರಾಜ್ಯದ ಬೇರೆ ಬೇರೆ ಕಡೆಯಿಂದ ಜನರನ್ನ ಆಹ್ವಾನಿಸಲಾಗುತ್ತದೆ. ಆದರೆ ಈ ಬಾರಿ ಉತ್ಸವಕ್ಕೆ ಬಂದವರ ಸಂಖ್ಯೆ ನೂರರ ಗಡಿ ದಾಟಿರಲಿಲ್ಲ. ಇನ್ನು ಉತ್ಸವಕ್ಕೆ ಬಂದವರು ಈ ಹಿಂದೆ ನಡೆದ ಉತ್ಸವಕ್ಕೆ ಬಂದವರೇ. ಸರ್ಕಾರದ ಹಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗಾಗಿ ಮಾಡಿದ ಉತ್ಸವದಂತೆ ಹಾರ್ನ್ ಬಿಲ್ ಉತ್ಸವ ಮಾಡಲಾಗಿದೆ ಎನ್ನುವ ಆರೋಪ ಹೇಳಿಬಂದಿದೆ.

ಸರ್ಕಾರ ಹಾರ್ನಬಿಲ್ ಉತ್ಸವಕ್ಕಾಗಿ ಲಕ್ಷಗಟ್ಟಲೇ ಹಣ ವೆಚ್ಚ ಮಾಡುತ್ತದೆ. ಆದರೆ ಯಾವುದೇ ಪ್ರಯೋಜನ ಆಗದೇ ಪ್ರವಾಸಿಗರನ್ನ ಆಕರ್ಷಿಸಲು ವಿಫಲ ಆಗುವಂತಹ ಇಂತಹ ಉತ್ಸವ ಮಾಡುವ ಅಗತ್ಯವಾದರು ಏನಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.