suddibindu. in
ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಮಾಘ ಮಾಸ-ಶುಕ್ಲಪಕ್ಷ-ಶನಿವಾರ
ತಿಥಿ : ಅಷ್ಟಮಿ ತಿಥಿಯು 01.04 ರವರೆಗೂ ಇದ್ದು ನಂತರ ನವಮಿ ಆರಂಭವಾಗುತ್ತದೆ.
ನಕ್ಷತ್ರ : ಕೃತ್ತಿಕಾ ನಕ್ಷತ್ರವು 01.26 ರವರೆಗೂ ಇರುತ್ತದೆ ನಂತರ ರೋಹಿಣಿ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 06.42
ಸೂರ್ಯಾಸ್ತ: ಸಂಜೆ 06.24
ರಾಹುಕಾಲ : ಬೆಳಗ್ಗೆ 09.00 ರಿಂದ 10.30
ಈ ದಿನದ ಅದೃಷ್ಟದ ಸಂಖ್ಯೆ :1-6-8-4

ಮೇಷ ರಾಶಿ : ಕುಟುಂಬದಲ್ಲಿ ಒತ್ತಡದ ಸನ್ನಿವೇಶ ಎದುರಾಗುತ್ತದೆ. ನಿಮ್ಮ ದಿಟ್ಟ ನಿಲುವಿನಿಂದ ಸಂತೋಷದ ವಾತಾವರಣವಿರುತ್ತದೆ. ಅಪೂರ್ಣಗೊಂಡ ಕೆಲಸ ಕಾರ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಉದ್ಯೋಗದಲ್ಲಿ ನಿಮ್ಮ ನಿರ್ಧಾರವನ್ನು ಎಲ್ಲರೂ ಒಪ್ಪುತ್ತಾರೆ. ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ವ್ಯಾಪಾರ ವ್ಯವಹಾರಗಳು ಸುಗಮದಲ್ಲಿ ಸಾಗಲಿವೆ. ಪಾಲುದಾರಿಕೆ ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯಲಿದೆ . ವಿದ್ಯಾರ್ಥಿಗಳು ಅನಾರೋಗ್ಯದ ಕಾರಣ ವಿಶ್ರಾಂತಿ ಬಯಸುತ್ತಾರೆ. ಸಂಗಾತಿ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುತ್ತದೆ.

ವೃಷಭ ರಾಶಿ : ಪ್ರತಿ ವಿಚಾರಗಳಲ್ಲಿಯೂ ತಪ್ಪು ಹುಡುಕಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿನ ರೀತಿ ನೀತಿಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಿರಿ. ಉದ್ಯೋಗ ಬದಲಿಸುವ ತೀರ್ಮಾನ ಕೈಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆಗಳು ಕಂಡು ಬರದು. ವಿದ್ಯಾರ್ಥಿಗಳು ಕಲಿಕೆಯ ವಿಚಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವರು.

ಇದನ್ನು ಓದಿ:ಕೊಲೆ ಬೆದರಿಕೆ ಪರಾರಿ


ಮಿಥುನ ರಾಶಿ :ಹಣಕಾಸಿನ ವಿಚಾರದಲ್ಲಿ ಕುಟುಂಬದ ಹಿರಿಯರ ಸಲಹೆ ಸದಾ ದೊರೆಯಲಿದೆ. ಸವಾಲೆನಿಸುವ ಕೆಲಸಗಳನ್ನು ಸುಲಭವಾಗಿ ಮಾಡಬಲ್ಲಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಮತ್ತು ಲಾಭ ಖಚಿತ. ವಿದ್ಯಾರ್ಥಿಗಳು ಪಾಠದ ಜೊತೆಯಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಕುಟುಂಬದ ಧಾರ್ಮಿಕ ಕ್ರಿಯಾವಿಧಿಗಳನ್ನು ಯಶಸ್ವಿಯಾಗಿ ನಡೆಸುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ಧೈರ್ಯದಿಂದ ಎದುರಿಸಬಲ್ಲಿರಿ.

ಕರ್ಕ ರಾಶಿ :ಕೆಲಸದಲ್ಲಿ ದಣಿಯುವ ಕಾರಣ ವಿಶ್ರಾಂತಿಯನ್ನು ಆಶ್ರಯಿಸುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸಿರುತ್ತದೆ. ಉದ್ಯೋಗದಲ್ಲಿ ಎದುರಾಗುವ ಅಡಚಣೆಗಳಿಗೆ ಪರಿಹಾರ ಹುಡುಕುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷತ ವರಮಾನ ದೊರೆಯುತ್ತದೆ. ಸ್ಟಾಕ್ ಮತ್ತು ಷೇರ್ ವ್ಯವಹಾರದಲ್ಲಿ ಬಂಡವಾಳ ಹೂಡುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಸದಾಕಾಲ ಮಗ್ನರಾಗಿರುತ್ತಾರೆ. ಹೆಚ್ಚಿನ ಹಣ ಸಂಪಾದಿಸಲು ಉಪವೃತ್ತಿಯನ್ನು ಆಶ್ರಯಿಸುವಿರಿ.

ಸಿಂಹ ರಾಶಿ :ಉದ್ಯೋಗದಲ್ಲಿ ಪ್ರತಿಷ್ಠಿತ ಸ್ಥಾನಮಾನ ದೊರೆಯಲಿದೆ. ವ್ಯಾಪಾರ ವ್ಯವಹಾರಗಳು ಪ್ರಯತ್ನಕ್ಕೆ ತಕ್ಕ ಫಲಿತಾಂಶವನ್ನು ನೀಡುತ್ತದೆ. ಅವಿವಾಹಿತರಿಗೆ ಸಂಬಂಧಿಕರ ಜೊತೆಯಲ್ಲಿ ವಿವಾಹ ನಿಶ್ಚಯವಾಗುತ್ತದೆ. ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸುವಿರಿ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುತ್ತಾರೆ. ಕೆಲಸ ಕಾರ್ಯದ ನಡುವೆ ವಿಶ್ರಾಂತಿ ಪಡೆಯುವಿರಿ. ಬೆಳ್ಳಿ ಮತ್ತು ಚಿನ್ನದ ಒಡವೆಗಳಿಗೆ ಹೆಚ್ಚಿನ ಹಣ ಬೇಕಾಗಬಹುದು.

ಕನ್ಯಾ ರಾಶಿ: ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆ ಸಂತಸದಿಂದ ಬಾಳುವಿರಿ. ಮಕ್ಕಳ ಜೊತೆ ಬಿಡುವಿನ ವೇಳೆ ಕಾಲ ಕಳೆಯುವಿರಿ. ಮಕ್ಕಳ ಕಾರಣ ಕುಟುಂಬದಲ್ಲಿ ಹಬ್ಬದ ವಾತಾವರಣ ಉಂಟಾಗಲಿದೆ. ವಿಶೇಷವಾದ ಅನುಕೂಲತೆಗಾಗಿ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಆತ್ಮೀಯರ ಆಗಮನದಿಂದ ಕಟ್ಟುಪಾಡಿನಲ್ಲಿ ಇರಬೇಕಾಗುತ್ತದೆ. ಖರ್ಚು ವೆಚ್ಚಗಳ ಮೇಲೆ ಹತೋಟಿ ಇರಲಿ.

ತುಲಾ ರಾಶಿ : ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳು ಲಾಭದ ಹಾದಿಯಲ್ಲಿ ಸಾಗಲಿವೆ. ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಕ್ರೀಡಾ ಸ್ಪರ್ಧೆಯಲ್ಲಿ ವೇಳೆ ಕಳೆಯುವರು. ಅನಿರೀಕ್ಷಿತ ಧನ ಲಾಭವಿರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ಪ್ರವಾಸ ಕೈಗೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ವಾಸವಿರುವ ಮನೆಯನ್ನು ನವೀಕರಿಸುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ :ಮಾತಿನಲ್ಲಿ ತಾಳ್ಮೆಯ ಕೊರತೆ ಕಂಡು ಬರುತ್ತದೆ. ಅತಿ ಸರಳ ವಿಚಾರಗಳಿಗೂ ಬೇರೆಯವರನ್ನು ಅವಲಂಬಿಸುವಿರಿ. ಕುಟುಂಬದಲ್ಲಿ ಸಹಕಾರದ ಭಾವನೆ ಮನೆ ಮಾಡಿರುತ್ತದೆ ಉದ್ಯೋಗದಲ್ಲಿ ಅಧಿಕಾರಿಗಳ ಪ್ರಶಂಸೆ ಹೊಸತನವನ್ನು ರೂಪಿಸುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಮಿತಿಮೀರಿ ಹಣವನ್ನು ತೊಡಗಿಸದಿರಿ. ವಿದ್ಯಾರ್ಥಿಗಳು ಒತ್ತಡವನ್ನು ಮರೆತು ಕಲಿಕೆಯಲ್ಲಿ ಮುಂದುವರೆಯುವರು. ಸಿಡುಕುತನವನ್ನು ಕಡಿಮೆ ಮಾಡಿಕೊಳ್ಳಿರಿ. ಅಪೂರ್ಣಗೊಂಡ ಕೆಲಸಗಳನ್ನು ಪೂರ್ಣಗೊಳಿಸುವಿರಿ.

ಧನು ರಾಶಿ : ನಿಮ್ಮ ಹೊಸ ವ್ಯಾಪಾರೋದ್ಯಮ ನಿಮ್ಮನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಸಾಧ್ಯತೆ ಇದೆ. ನೀವು ಕೆಲಸದಲ್ಲಿ ನಿರೀಕ್ಷೆಗಳನ್ನು ತಲುಪಲು ನಿಮ್ಮ ವೈಯಕ್ತಿಕ ಜೀವನ ನಿರ್ಲಕ್ಷಿಸುತ್ತೀರಿ. ಯೋಜಿಸಿದಂತೆ ವಿಷಯಗಳು ನಡೆಯದೇ ಇರುವುದರಿಂದ ನಿರಾಶೆಯ ಭಾವನೆ ಮೂಡುತ್ತದೆ, ಮತ್ತು ನಿಮ್ಮ ಪ್ರಯತ್ನಗಳು ವ್ಯರ್ಥವಾಗುವ ಸಾಧ್ಯತೆ ಇದೆ.

ಮಕರ ರಾಶಿ : ಹೊಸ ಕೆಲಸ ಪ್ರಾರಂಭಿಸಲು ಇಂದು ಪವಿತ್ರ ದಿನವಾಗಿದೆ. ಕಛೇರಿಯಲ್ಲಿ ನೀವು ಹೊಸ ಸ್ಥಾನಗಳನ್ನು ಪಡೆಯುತ್ತೀರಿ, ಮತ್ತು ಅದರಲ್ಲಿ ಉನ್ನತ ಸಾಧನೆ ಮಾಡುತ್ತೀರಿ. ನೀವು ಕೈಗೊಂಡ ಯಾವುದೇ ಕೆಲಸದಲ್ಲಿಯೂ ನೀವು ಯಶಸ್ಸು ಪಡೆಯುತ್ತೀರಿ. ಇಂದು ನಿಮಗೆ ಅದೃಷ್ಟದ ದಿನವಾಗಿದೆ.

ಕುಂಭ ರಾಶಿ : ಅನಾವಶ್ಯಕವಾಗಿ ಕೆಲಸ ಕಾರ್ಯಗಳನ್ನು ಮುಂದೂಡುವಿರಿ. ಕುಟುಂಬದಲ್ಲಿ ಗಲಿಬಿಲಿಯ ವಾತಾವರಣ ನೆಲೆಸಿರುತ್ತದೆ. ಪ್ರತಿ ವಿಚಾರಗಳಲ್ಲಿಯೂ ತಪ್ಪು ಹುಡುಕಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿನ ರೀತಿ ನೀತಿಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಿರಿ. ಉದ್ಯೋಗ ಬದಲಿಸುವ ತೀರ್ಮಾನ ಕೈಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆಗಳು ಕಂಡು ಬರದು. ವಿದ್ಯಾರ್ಥಿಗಳು ಕಲಿಕೆಯ ವಿಚಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವರು

ಮೀನ ರಾಶಿ :ಉದ್ಯೋಗದಲ್ಲಿ ಉಂಟಾಗುವ ಬದಲಾವಣೆಗಳು ನಿಮ್ಮ ಪರವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಕುಟುಂಬದ ಹಿರಿಯರ ಸಲಹೆ ಸದಾ ದೊರೆಯಲಿದೆ. ಸವಾಲೆನಿಸುವ ಕೆಲಸಗಳನ್ನು ಸುಲಭವಾಗಿ ಮಾಡಬಲ್ಲಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಮತ್ತು ಲಾಭ ಖಚಿತ. ವಿದ್ಯಾರ್ಥಿಗಳು ಪಾಠದ ಜೊತೆಯಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಕುಟುಂಬದ ಧಾರ್ಮಿಕ ಕ್ರಿಯಾವಿಧಿಗಳನ್ನು ಯಶಸ್ವಿಯಾಗಿ ನಡೆಸುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ಧೈರ್ಯದಿಂದ ಎದುರಿಸಬಲ್ಲಿರಿ.