suddibindu. in
ಶಿರಸಿ : ವ್ಯಕ್ತಿ ಓರ್ವ ಅಕ್ರಮವಾಗಿ ಮಾಲ್ಕಿ ಜಮೀನಿನ ಒಳಗೆ ನುಗ್ಗಿ ಓರ್ವ ವ್ಯಕ್ತಿಯ ಮೇಲೆ ಹಲ್ಲೆ(attack )ಮಾಡಿರುವ ಘಟನೆ ಉತ್ತರ ಕನ್ನಡ (uttar kannada) ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆ ಹಳ್ಳಕ್ರಾಸ್ ಬಳಿ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಗಿರೀಶ್ ಗಣಪತಿ ಹೆಗಡೆ ಎಂಬಾತ ರಾಘವೇಂದ್ರ ಹೆಗಡೆ ಎಂಬುವವರ ಜಮೀನಿನ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿ ಜಮೀನು ಮಾಲೀಕರಿಗೆ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ಮಾತನಾಡಿ, ರಾಘವೇಂದ್ರ ಹೆಗಡೆ ಜೊತೆ ಜಗಳವಾಡಿ ಜೀವ ಬೆದರಿಕೆ ಹಾಕಿದ್ದಾನೆ. ನಂತರದಲ್ಲಿ ಸಂಜೆ ವೇಳೆ‌ ರಾಘವೇಂದ್ರ ಹೆಗಡೆ ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಿರುವುದಲ್ಲದೇ ಕೊಲೆ ಮಾಡುವುದಾಗಿ‌ ರಾಘವೇಂದ್ರ ಹೆಗಡೆಗೆ ಜೀವ ಬೆದರಿಕೆ (Life threatening)ಹಾಕಿದ್ದಾನೆ.

ಇದನ್ನ ಓದಿ:-ಭಾಷೆ ಹಿಡಿತದಲ್ಲಿರಲಿ : ಹೆಗಡೆ ಕೋರ್ಟ್ ಪಾಠ

ಈ ಬಗ್ಗೆ ಆರೋಪಿತನಾಗಿರುವ ಗಿರೀಶ್ ಹೆಗಡೆ ವಿರುದ್ಧ ರಾಘವೇಂದ್ರ ಹೆಗಡೆ ಶಿರಸಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Oc ಓಸಿ-ಮಟ್ಕಾ, ಸಾವಿರಾರು ರೂಪಾಯಿ ವಶಕ್ಕೆ
ಕುಮಟಾ(kumta) ತಾಲೂಕಿನ ಅಳ್ವೆಕೋಡಿಯ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಓರ್ವ ಒಸಿ-ಮಟ್ಕಾ ತೆಗೆದುಕೊಳ್ಳುವಾಗ ಪೊಲೀಸರು ದಾಳಿ ನಡೆಸಿ ಸಾವಿರಾರು ರೂಪಾಯಿ ಹಣವನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಅಳ್ವೆಕೋಡಿಯ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಓರ್ವ ರಸ್ತೆಯಲ್ಲಿ ಓಡಾಡುವ ಜನರನ್ನ ಕರೆದು. ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿಕೊಂಡು ಜನರಿಗೆ ನಂಬಿಸಿ ಓಸಿ-ಮಟ್ಕಾ ತೆಗೆದುಕೊಳ್ಳುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಪಡೆದ ಕುಮಟಾ ಪೊಲೀಸರು ದಾಳಿ ನಡೆಸಿದ್ದಾರೆ.


ಈ ವೇಳೆ ಓಸಿ- ಮಟ್ಕಾ ಆಟಕ್ಕಾಗಿ ಜನರಿಂದ ಸಂಗ್ರಹಿಸಿ ಇಟ್ಟುಕೊಂಡಿದ್ದ ಸುಮಾರು 6590 ರೂಪಾಯಿ ಹಣ ಹಾಗೂ ಆಟಕ್ಕೆ ಬಳಸಲಾಗುವ ಎಲ್ಲಾ ವಸ್ತುಗಳನ್ನ ವಶಕ್ಕೆ ಪಡೆದುಕೊಂಡು ಕೇಸ್ ದಾಖಲಿಸಿಕೊಂಡಿದ್ದಾರೆ‌.