ಸುದ್ದಿಬಿಂದು ಬ್ಯೂರೋ
ಮುಂಡಗೋಡ : ತಾಲೂಕಿನ ಶಿಂಗನಳ್ಳಿ ಜಲಾಶಯದ ಸಮೀಪದ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರೋ ಶವ, ಕೊಳೆತು ದುರ್ನಾತ ಬೀರುತ್ತಿದೆ.

ಸುಮಾರು 38 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಮುಖ ಕೊಳೆತು ವಿಕಾರವಾಗಿದೆ. ಕಾಡಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡಿರೋ ಸ್ಥಿತಿಯಲ್ಲಿರೋ ಶವದ ಬಲಗೈ ಕಟ್ ಆಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೊ ಅನ್ನೋ ಬಗ್ಗೆ ಇನ್ನಷ್ಟೇ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ‌.

ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ