ಸುದ್ದಿಬಿಂದು ಬ್ಯೂರೋ
ಶಿವಮೊಗ್ಗ:
  ಸಿಡಿಲು ಬಡಿದು ವಿವಾಹಿತ ಮಹಿಳೆ ಓರ್ವಳು  ಮೃತಪಟ್ಟಿರುವ ಘಟನೆ ನಡೆದಿದೆ.  ಘಟನೆಯಲ್ಲಿ ಕಾರ್ಮಿಕ  ವಿವಾಹಿತ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದಾಳೆ.

ಶಿವಮೊಗ್ಗದಲ್ಲಿ ಭಾರೀ ಸಿಡಿಲು ಸಹಿತ ಮಳೆ ಸುರಿಯುತ್ತಿದ್ದುಉ ಸಿಡಿಲು ಬಡಿದು ಲಕ್ಷ್ಮೀ ಬಾಯಿ(28) ಎಂಬ ಮಹಿಳೆ ಸಾವನ್ನಪ್ಪಿದ್ದಾಳೆ. ಕುರಿಗಳಿಗೆ ಮೇವು ತರಲು ಹೋದಾಗ‌ಈ ಘಟನೆ ಸಂಭವಿಸಿದೆ.

ಮಹಿಳೆಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ತರಲಾಗಿದೆ. ಕುಮಾರ ನಾಯ್ಕ ಗಾರೆ ಕೆಲಸ ಮಾಡುತ್ತಿದ್ದು ಬೊಮ್ಮನ್ ಕಟ್ಟೆಯ ನಿವಾಸಿಗಳಾಗಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೃತ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಚಿವರಿಗೆ ವರದಿ ಒಪ್ಪಿಸಿದ್ದಾರೆ.