ಸುದ್ದಿಬಿಂದು ಬ್ಯೂರೋ
ಕಾರವಾರ : ಪ್ರಸಿದ್ದ ಇಡಗುಂಜಿ ಮಹಾಗಣಪತಿ (Idagunji Maha Ganapati Temple) ದೇವಾಲಯದಲ್ಲಿ ಇದೀಗ ಪಂಕ್ತಿ ಬೇಧ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.ಈ ಮೊದಲು ದಕ್ಷೀಣ ಕನ್ನಡ ಮತ್ತು ಉಡುಪಿಯಲ್ಲಿ ಜೋರಾಗಿದ್ದು,ಕುಕ್ಕಿ ಸುಬ್ರಹ್ಮಣ್ಯ, ಉಡುಪಿ ಮಠದಲ್ಲಿ ಜೋರಾಗಿತ್ತು,ಆದರೆ ಇದೀಗ ಉತ್ತರಕನ್ನಡ(uttarakannda)ಜಿಲ್ಲೆಯ ಇಡಗುಂಜಿ ದೇವಸ್ಥಾನಕ್ಕೂ ಸಹ ಕಾಲಿಟ್ಟು,ಈ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪಂಕ್ತಿಭೇದದ ವಿಡಿಯೋ ವೈರಲ್‌ ಆಗಿದ್ದು,ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿದೆ.

ಇಡಗುಂಜಿ ದೇವಸ್ಥಾನದಲ್ಲಿ ಈ ಹಿಂದಿನಿಂದಲ್ಲೂ ಪ್ರತಿನಿತ್ಯ ಅನ್ನದಾಸೋಹ ನಡೆಯುತ್ತಿದೆ.ಪ್ರವಾಸಿಗರೊಬ್ಬರು ದೇವಸ್ಥಾನಕ್ಕೆ ಹೋಗಿದ್ದ ವೇಳೆ ಪಂಕ್ತಿ ವಿಚಾರವಾಗಿ ಚರ್ಚೆಗಳ ಬಗ್ಗೆ ಮಾತಿಗೆ ಮಾತು ಬೆಳೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ..

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಪಂಕ್ತಿ ಭೇಧವಿಚಾರ ನನ್ನ ಗಮನಕ್ಕೂ ಬಂದಿದೆ, ಸಂವಿಧಾನದದ ಅಡಿಯಲ್ಲಿ ಎಲ್ಲರೂ ಸಮಾನರು.ಆ ರೀತಿ ಮಾಡಲು ಅವಕಾಶವಿಲ್ಲ. ಧಾರ್ಮಿಕ ದತ್ತಿ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಕಾರಿ ಗಂಗೂಬಾಯಿ ಮಾನಕರ್‌ ತಿಳಿಸಿದ್ದಾರೆ.