ಸುದ್ದಿಬಿಂದು ಬ್ಯೂರೋ
ಕಾರವಾರ : ಇಂದು ಕಾರವಾರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಗೆ ಆಗಮಿಸಿದ ಸನ್ಮಾನ್ಯ ಸಂಸದ ಅನಂತಕುಮಾರ ಹೆಗಡೆ ಅವರು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಸತೀಶ ಸೈಲ್ ಅವರನ್ನು ಅಭಿನಂದಿಸಿದ ಪರಿ ಇದು.

ಅರಾಜಕತೆಯ ವಿರುದ್ಧ ಸ್ವರಾಜ್ಯಕ್ಕಾಗಿ ಹೋರಾಡಿ ಗೆದ್ದ ಅರ್ಜುನನನ್ನು ಶ್ರೀ ಕೃಷ್ಣ ಅಪ್ಪಿದಂತೆ…ಲಂಕಾದಹನ ಮಾಡಿದ ಆಂಜನೇಯನನ್ನು ಶ್ರೀ ರಾಮ‌ ಆಲಂಗಿಸಿದಂತೆ… ಈ ಚಿತ್ರ ಅನೇಕರಲ್ಲಿ ಅಚ್ಚರಿ ಹುಟ್ಟಿಸಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಈ ಅಪ್ಪುಗೆಯಾ? ಎನ್ನುವ ಪ್ರಶ್ನೆಯೂ ಅನೇಕರನ್ನು ಕಾಡಲಾರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕನ್ನಡ ಜಿಲ್ಲೆಗೆ ಬಂದು ಪ್ರಚಾರ ಮಾಡಿದರು. ಆದರೆ ಸಂಸದ ಹೆಗಡೆ ಮಾತ್ರ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಎಲ್ಲಿಯೂ ಪ್ರಚಾರಕ್ಕೆ ಹೋಗದೆ ಬಿಜೆಪಿ ಅಭ್ಯರ್ಥಿಗಳ ಪಾಲಿಗೆ ನಿಲುಕದ ನಕ್ಷತ್ರವಾಗುಳಿದರು.ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಕ್ಕಾಗಿ ಸಂಸದ ಹೆಗಡೆ ಅವರಿಗೆ ಅನೇಕ ಅಭ್ಯರ್ಥಿಗಳು ಸೋಲಬೇಕಿತ್ತು.

ಅದರಲ್ಲಿ ಕಾರವಾರದ ರೂಪಾಲಿ ಕೂಡ ಒಬ್ಬರು. ಹಾಗಾಗಿಯೇ ಸಂಸದರು ರೂಪಾಲಿ ವಿರುದ್ಧ ಗೆದ್ದ ಸೈಲ್ ಅವರನ್ನು ಬಿಗಿದಪ್ಪಿಕೊಂಡರು ಎಂದು ವಿಶ್ಲೇಷಿಸಲಾಗುತ್ತಿದೆ….